ADVERTISEMENT

20ರಂದು ಕಿಸಾನ್ ವಿಜಯ್‌ ದಿವಸ್, ಮೇಣದ ಬತ್ತಿ ಜಾಥಾ: ಕಾಂಗ್ರೆಸ್

ಪಿಟಿಐ
Published 19 ನವೆಂಬರ್ 2021, 13:54 IST
Last Updated 19 ನವೆಂಬರ್ 2021, 13:54 IST
ತಿದ್ದುಪಡಿಯಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ತೀರ್ಮಾನದ ಹಿನ್ನೆಲೆಯಲ್ಲಿ ಗುರುವಾರ ನವದೆಹಲಿಯ ಟಿಕ್ರಿ ಗಡಿಯಲ್ಲಿ ರೈತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು
ತಿದ್ದುಪಡಿಯಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ತೀರ್ಮಾನದ ಹಿನ್ನೆಲೆಯಲ್ಲಿ ಗುರುವಾರ ನವದೆಹಲಿಯ ಟಿಕ್ರಿ ಗಡಿಯಲ್ಲಿ ರೈತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು   

ನವದೆಹಲಿ: ತಿದ್ದುಪಡಿಯಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ಕೈಬಿಡುವ ಕೇಂದ್ರದ ನಿರ್ಧಾರದ ಹಿನ್ನೆಲೆಯಲ್ಲಿ ನ.20 ಅನ್ನು ‘ಕಿಸಾನ್ ವಿಜಯ್‌ ದಿವಸ್’ ಆಗಿ ಆಚರಿಸಲು ಕಾಂಗ್ರೆಸ್‌ ಪಕ್ಷ ತೀರ್ಮಾನಿಸಿದೆ. ಆ ದಿನ ದೇಶದಾದ್ಯಂತ ವಿಜಯೋತ್ಸವ ರ‍್ಯಾಲಿಗಳನ್ನು ಆಯೋಜಿಸಲಿದೆ.‌

ಸುದೀರ್ಘ ಕಾಲ ನಡೆದ ಪ್ರತಿಭಟನೆಯ ಅವಧಿಯಲ್ಲಿ ಮೃತಪಟ್ಟಿದ್ದ ಸುಮಾರು 700 ಮಂದಿ ರೈತರ ಕುಟುಂಬ ಸದಸ್ಯರನ್ನು ಪಕ್ಷದ ಮುಖಂಡರು ಭೇಟಿಯಾಗಲಿದ್ದು, ಹುತಾತ್ಮ ರೈತರಿಗೆ ಗೌರವವನ್ನು ಸಲ್ಲಿಸಲು ಆ ದಿನ ಮೇಣದ ಬತ್ತಿ ಜಾಥಾವನ್ನೂ ನಡೆಸಲಾಗುತ್ತದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ಈ ಕುರಿತು ಪಕ್ಷದ ರಾಜ್ಯ ಘಟಕಗಳಿಗೆ ಪತ್ರ ಬರೆದಿದ್ದಾರೆ. ಆ ದಿನ ನಿಗದಿಯಂತೆ ರಾಜ್ಯ, ಜಿಲ್ಲಾ, ಬ್ಲಾಕ್‌ ಮಟ್ಟದಲ್ಲಿ ವಿಜಯೋತ್ಸವ ರ‍್ಯಾಲಿ, ಮೇಣದ ಬತ್ತಿ ಜಾಥಾ ಆಯೋಜಿಸಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.