ADVERTISEMENT

ಮಾನವೇಂದ್ರ ಪ್ಯಾರಾಚೂಟ್ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 17:35 IST
Last Updated 2 ಡಿಸೆಂಬರ್ 2018, 17:35 IST
ಮಾನವೇಂದ್ರ ಸಿಂಗ್
ಮಾನವೇಂದ್ರ ಸಿಂಗ್   

ಝಾಲಾವಾಡ್:ಝಾಲಾವಾಡ್‌ಗೆ 700–800 ಕಿ.ಮೀ. ದೂರದಿಂದ ಬಂದಿರುವ ಮಾನವೇಂದ್ರ ಸಿಂಗ್ ಪ್ಯಾರಾಚೂಟ್ ಅಭ್ಯರ್ಥಿ. ಝಾಲಾವಾಡ್‌ನಲ್ಲಿ ಹೊರಗಿನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು. ಆದರೆ ಈಗ ಮಾನವೇಂದ್ರ ಸಿಂಗ್‌ರನ್ನು ಪ್ಯಾರಾಚೂಟ್‌ ಮೂಲಕ ಇಲ್ಲಿಗೆ ತಂದಿಳಿಸಿದ್ದಾರೆ. ಜಸ್ವಂತ್ ಸಿಂಗ್ ಮತ್ತು ಮಾನವೇಂದ್ರ ಸಿಂಗ್ ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಅಲೆಯುತ್ತಲೇ ಇದ್ದಾರೆ. ಬರ್ಮಾರ್‌ನಿಂದ ಪ್ಯಾರಾಚೂಟ್‌ನಲ್ಲಿ ಇಲ್ಲಿಗೆ ಬಂದಿರುವ ಮಾನವೇಂದ್ರರನ್ನು ಮತದಾರರು ಅಲ್ಲಿಗೇ ವಾಪಸ್ ಕಳುಹಿಸಲಿದ್ದಾರೆ

–ದುಶ್ಯಂತ್ ಸಿಂಗ್, ಬಿಜೆಪಿ ಸಂಸದ ಮತ್ತು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಪುತ್ರ

ನಿರ್ಗಮಿಸುತ್ತಿರುವ ಸರ್ಕಾರಕ್ಕೆ ಏಕೆ ಮತ?

ADVERTISEMENT

ಝಾಲಾವಾಡ್: ಇಲ್ಲಿ ಮತದಾರರ ಅಲೆ ಕಾಂಗ್ರೆಸ್ ಪರವಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲುತ್ತದೋ ಇಲ್ಲವೋ ಎಂಬುದು ಈಗ ಪ್ರಶ್ನೆಯೇ ಅಲ್ಲ. ಗೆಲುವು ಕಾಂಗ್ರೆಸ್‌ನದ್ದೇ ಎಂಬುದು ನಿಚ್ಚಳವಾಗಿದೆ. ಮತದಾನ ನಡೆಯುವ ಮುನ್ನವೇ ಫಲಿತಾಂಶ ಏನು ಎಂಬುದು ಜನಕ್ಕೆ ಗೊತ್ತಿದೆ. ಆದರೆ ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದೇ ಈಗ ಚರ್ಚೆಯ ವಿಷಯ. ಕೆಲವರು 130 ಸ್ಥಾನ ಎನ್ನುತ್ತಾರೆ, ಕೆಲವರು 140 ಎನ್ನುತ್ತಾರೆ. ಇನ್ನೂ ಕೆಲವರು 150 ಎನ್ನುತ್ತಾರೆ. ಈಗ ನನ್ನ ಪ್ರಶ್ನೆ ಇಷ್ಟೆ. ನೀವೆಲ್ಲಾ ಇನ್‌ಕಮಿಂಗ್ ಸರ್ಕಾರಕ್ಕೆ ಮತ ಹಾಕುತ್ತೀರೋ ಅಥವಾ ಔಟ್‌ಗೋಯಿಂಗ್ ಸರ್ಕಾರಕ್ಕೆ ಮತ ಹಾಕುತ್ತೀರೋ?

–ಮಾನವೇಂದ್ರ ಸಿಂಗ್, ವಸುಂಧರಾ ರಾಜೇ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ

ಮಂದಿರ ನಮ್ಮ ಸಂಸ್ಕೃತಿಯಲ್ಲೇ ಇದೆ

ಜೈಪುರ: ಚುನಾವಣೆ ಹತ್ತಿರ ಬಂದಾಗ ಮಾತ್ರ ಕಾಂಗ್ರೆಸ್‌ನವರಿಗೆ ದೇವಾಲಯ ನೆನಪಾಗುತ್ತದೆ. ಆಗ ಮಾತ್ರ ದೇವಾಲಯಕ್ಕೆ ಓಡುವ ಅವರು ಪ್ರಾರ್ಥನೆ ಸಲ್ಲಿಸಲು ಆರಂಭಿಸುತ್ತಾರೆ.ಕಾಂಗ್ರೆಸ್‌ನವರಿಗೆ ಗೋವು ಮತ್ತು ಮಂದಿರಗಳು ಚುನಾವಣೆಯ ವಿಷಯಗಳಾಗಿರಬಹುದು. ಆದರೆ ಇವರೆಡೂ ವಿಚಾರಗಳು ನಮ್ಮ (ಬಿಜೆಪಿಯವರ) ಸಂಸ್ಕೃತಿಯಲ್ಲೇ ಇದೆ. ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಇವೆರಡೂ ಹಾಸುಹೊಕ್ಕಾಗಿವೆ

–ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ

ಪ್ರೈವೇಟ್ ಲಿಮಿಟೆಡ್ ಪಕ್ಷಗಳು

ಹೈದರಾಬಾದ್: ಟಿಆರ್‌ಎಸ್‌, ಟಿಡಿಪಿ ಮತ್ತು ಕಾಂಗ್ರೆಸ್‌ಗಳು ‘ಪ್ರೈವೇಟ್ ಲಿಮಿಟೆಡ್ ಪಕ್ಷಗಳು’. ಕಾಂಗ್ರೆಸ್, ಗಾಂಧಿ ಕುಟುಂಬಕ್ಕೆ ಸೀಮಿತವಾದ ಪಕ್ಷ, ಟಿಆರ್‌ಎಸ್‌, ಚಂದ್ರಶೇಖರ್ ರಾವ್ ಕುಟುಂಬದ ಪಕ್ಷವಾಗಿದೆ. ಜನರ ಪಕ್ಷವಾಗಿದ್ದ ಟಿಡಿಪಿಯನ್ನು ಎನ್‌. ಚಂದ್ರಬಾಬು ನಾಯ್ಡು ತಮ್ಮ ಪಕ್ಷವನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಇವೆಲ್ಲವೂ ಪ್ರೈವೇಟ್ ಲಿಮಿಟೆಡ್ ಪಕ್ಷಗಳು. ಆದರೆ ಬಿಜೆಪಿ ನಿಜವಾಗಿಯೂ ಪ್ರಜಾಸತ್ತಾತ್ಮಕ ಪಕ್ಷ. ನನ್ನಂತಹ ಸಾಮಾನ್ಯ ಕಾರ್ಯಕರ್ತ ಇಲ್ಲಿ ಪಕ್ಷದ ಅಧ್ಯಕ್ಷನಾಗಬಹುದು. ಚಹಾ ಮಾರುವವರು ಪ್ರಧಾನಿಯಾಗಬಹುದು

–ನಿತಿನ್ ಗಡ್ಕರಿ, ಕೇಂದ್ರ ಸಚಿವ


ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.