ADVERTISEMENT

ಕಾಂಗ್ರೆಸ್‌ ಪಕ್ಷವು ಸುಳ್ಳು ಭರವಸೆಗಳನ್ನು ವಿತರಿಸುವ ಎಟಿಎಂ: ಅಮಿತ್ ಶಾ

ಏಜೆನ್ಸೀಸ್
Published 18 ನವೆಂಬರ್ 2018, 2:56 IST
Last Updated 18 ನವೆಂಬರ್ 2018, 2:56 IST
   

ರಾಯ್‌ಪುರ: ಛತ್ತೀಸ್‌ಗಢ ವಿಧಾನಸಭೆ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷಅಮಿತ್‌ ಶಾ,ಕಾಂಗ್ರೆಸ್‌ ಪಕ್ಷವು ಅಭಿವೃದ್ಧಿಯ ಬದಲಾಗಿ ಸುಳ್ಳು ಭರವಸೆಗಳನ್ನು ವಿತರಿಸುವಎಟಿಎಂಎಂದು ಆರೋಪಿಸಿದರು.

2000ನೇ ಇಸವಿಯಲ್ಲಿ ರಾಜ್ಯ ರಚನೆಯಾದಾಗಿನಿಂದಲೂ ರಾಜ್ಯದ ಅಭಿವೃದ್ಧಿಯ ಕುರಿತು ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದೆ ಎಂದು ದೂರಿದರು.

‘ಛತ್ತೀಸ್‌ಗಢವನ್ನು ರಾಜ್ಯವಾಗಿ ರಚನೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಯಾವುದೇ ಕಾರ್ಯ ಮಾಡಿಲ್ಲ.ಕೇಂದ್ರದಲ್ಲಿ ಅಟಲ್‌ ಜೀ(ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ) ಸರ್ಕಾರ ಅಧಿಕಾರಕ್ಕೆ ಬಂದದ್ದರಿಂದ ಅದು ಸಾಧ್ಯವಾಯಿತು. ಇಲ್ಲವಾದರೆಛತ್ತೀಸ್‌ಗಢವು ಮಧ್ಯಪ್ರದೇಶದ ಒಂದು ಭಾಗವಾಗಿಯೇ ಉಳಿಯಬೇಕಿತ್ತು. ವಾಜಪೇಯಿ ಅವರು ಛತ್ತೀಸ್‌ಗಢ ರಾಜ್ಯ ನಿರ್ಮಾಣ ಮಾಡಿದರು. ಕಳೆದ 15 ವರ್ಷಗಳಿಂದ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್‌ ಪಕ್ಷವು ತನ್ನ ಸುಳ್ಳು ಭರವಸೆಗಳಿಗೇಹೆಸರುವಾಸಿ. ತನ್ನ ಆಡಳಿತಾವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ರಮಣ್‌ ಸಿಂಗ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯವನ್ನು ಶಕ್ತಿಶಾಲಿಯಾಗಿಸಿದ್ದಾರೆ. ರಾಜ್ಯವು ಇದೀಗ ಅಲ್ಯೂಮಿನಿಯಂ, ಸಿಮೆಂಟ್ ಮತ್ತು ಉಕ್ಕು ಉತ್ಪಾದನೆಯಿಂದಾಗಿ ಖ್ಯಾತಿಗಳಿಸಿದೆ’ ಎಂದರು.

ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆ ಬಗ್ಗೆಯೂವ್ಯಂಗ್ಯವಾಡಿದ ಶಾ, ‘ಕಾಂಗ್ರೆಸ್‌ ಪ್ರಣಾಳಿಕೆಯು ‘ಸುಳ್ಳಿನ ರಾಶಿ’. ಅದುಸುಳ್ಳು ಭರವಸೆಗಳನ್ನು ನೀಡುವ ಪಕ್ಷವಾಗಿದ್ದು, ಬಿಜೆಪಿ ಮಾತ್ರವೇ ಅಭಿವೃದ್ಧಿ ಕೆಲಸಗಳನ್ನು ಮಾಡುವ ಏಕೈಕ ಪಕ್ಷ’ ಎಂದು ಅಭಿಪ್ರಾಯಪಟ್ಟರು.

ಶಾ ಹೇಳಿಕೆಯನ್ನು ತಿರಸ್ಕರಿಸಿರುವ ಕಾಂಗ್ರೆಸ್‌ ವಕ್ತಾರ ಆರ್‌.ಪಿ.ಸಿಂಗ್‌, ‘ಮೋದಿ ಹಾಗೂ ರಮಣ್‌ ಸಿಂಗ್‌ ಅವರ ಬಗ್ಗೆ ಹಾಗು ಅವರು ಇಲ್ಲಿವರೆಗೆ ಹೇಳಿರುವ ಸುಳ್ಳುಗಳ ಬಗ್ಗೆ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತು. ಅವರಿಬ್ಬರ ಸುಳ್ಳುಗಳ ಕಾರಣದಿಂದಾಗಿಯೇ ನಾವು ಈ ಬಾರಿ ಚುನಾವಣೆಯನ್ನು ಗೆಲ್ಲಲಿದ್ದೇವೆ. ಅಮಿತ್‌ ಶಾ ಜನರನ್ನು ದಾರಿತಪ್ಪಿಸುವ ವ್ಯಕ್ತಿ’ ಎಂದು ಟೀಕಿಸಿದರು.

90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ 18 ಸ್ಥಾನಗಳಿಗೆ ನವೆಂಬರ್ 12 ರಂದುಮತದಾನ ನಡೆದಿದ್ದು, ಉಳಿದ 72 ಸ್ಥಾನಗಳಿಗೆ ನವೆಂಬರ್ 20 ರಂದುಎರಡನೇ ಹಂತದ ಮತದಾನ ನಡೆಯಲಿದೆ.

ಫಲಿತಾಂಶ ಡಿಸೆಂಬರ್ 11 ರಂದು ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.