ರೇಖಾ ಗುಪ್ತಾ
ನವದೆಹಲಿ: ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರ ಪ್ರಮಾಣ ವಚನ ಸಮಾರಂಭಕ್ಕೆ ವೇದಿಕೆ ಸಿದ್ಧವಾಗುತ್ತಿದ್ದಂತೆ, ಮತ್ತೊಂದು ಕಾರ್ಯಕ್ರಮದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಮೂರು ದಶಕಗಳ ಹಳೆಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಾಗಿ ಕಾಂಗ್ರೆಸ್ ನಾಯಕಿ ಅಲಕಾ ಲಂಬಾ ಹಾಗೂ ರೇಖಾ ಗುಪ್ತಾ ಒಟ್ಟಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಫೋಟೊವನ್ನು ಅಲಕಾ ಲಂಬಾ ಅವರೇ ಶೇರ್ ಮಾಡಿದ್ದಾರೆ.
1995ರ ಸ್ಮರಣೀಯ ಫೋಟೊ ಇದು. ರೇಖಾ ಮತ್ತು ನಾನು ಒಟ್ಟಿಗೆ ಪ್ರಮಾಣ ವಚನ ಸ್ವೀಕರಿಸಿದಾಗ ಎಂದು ಪೋಟೊ ಹಂಚಿಕೊಂಡು ಅಲಕಾ ಲಂಬಾ ಪೋಸ್ಟ್ ಮಾಡಿದ್ದಾರೆ.
ರೇಖಾ ಗುಪ್ತಾ ಅವರಿಗೆ ಅಭಿನಂದನೆಗಳು, ನಿಮ್ಮ ಆಡಳಿತದಲ್ಲಿ ಯಮುನಾ ನದಿ ಸ್ವಚ್ಛವಾಗಿರುತ್ತದೆ ಮತ್ತು ಹೆಣ್ಣುಮಕ್ಕಳು ಸುರಕ್ಷಿತರಾಗಿರುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.