ADVERTISEMENT

ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಒತ್ತೆಯಾಳನ್ನಾಗಿ ಮಾಡಿಕೊಂಡಿದೆ: ದಿಗ್ವಿಜಯ್ ಸಿಂಗ್

ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು

ಏಜೆನ್ಸೀಸ್
Published 12 ಮಾರ್ಚ್ 2020, 11:14 IST
Last Updated 12 ಮಾರ್ಚ್ 2020, 11:14 IST
ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್
ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್    

ಮಧ್ಯಪ್ರದೇಶ (ಎಎನ್ಐ): ಕಾಂಗ್ರೆಸ್‌‌ನ 19 ಮಂದಿ ಶಾಸಕರನ್ನು ಬಿಜೆಪಿ ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಮುಖಂಡದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

ಮಧ್ಯಪ್ರದೇಶದ ಬೆಳವಣಿಗೆಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಶಾಸಕರು ದೈಹಿಕವಾಗಿ ಸಭಾಧ್ಯಕ್ಷರ ಮುಂದೆ ಹಾಜರಾಗಬೇಕು. ಅಲ್ಲದೆ, ಅವರೇ ಖುದ್ದು ಸಭಾಧ್ಯಕ್ಷರ ಮುಂದೆ ವಿವರಣೆ ನೀಡುವವರೆಗೂ ರಾಜೀನಾಮೆ ಅಂಗೀಕಾರವಾಗುವುದಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ.ಯಾವುದೇ ಕಾರಣಕ್ಕೂ ವಿಶ್ವಾಸ ಮತ ಯಾಚನೆ ಪ್ರಶ್ನೆಯೇ ಇಲ್ಲ. ಯಾಕೆಂದರೆ, 19 ಮಂದಿ ಶಾಸಕರ ರಾಜೀನಾಮೆಯೇ ಅಂಗೀಕಾರವಾಗಿಲ್ಲ ಎಂದು ಅವರು ಹೇಳಿದ್ದಾರೆ.

ರಾಜಕೀಯ ಬಿಕ್ಕಟ್ಟು

ADVERTISEMENT

ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಈ ಸಮಯದಲ್ಲಿಕಳೆದ ಎರಡು ದಿನಗಳ ಹಿಂದೆ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌‌ನ ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇವರ ಜೊತೆ 19 ಮಂದಿ ಶಾಸಕರು ರಾಜೀನಾಮೆ ಪತ್ರವನ್ನು ವಿಧಾನಸಭಾಧ್ಯಕ್ಷರಿಗೆ ಕಳುಹಿಸಿದ್ದು ಮಧ್ಯಪ್ರದೇಶವನ್ನೇ ತೊರೆದು ಕರ್ನಾಟಕದ ರೆಸಾರ್ಟ್‌‌ನಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.

107 ಶಾಸಕರ ಬಲ ಹೊಂದಿ ವಿರೋಧಪಕ್ಷದಲ್ಲಿರುವ ಬಿಜೆಪಿಗೆ 19 ಶಾಸಕರು ಸೇರ್ಪಡೆಗೊಂಡರೆಬಿಜೆಪಿ ಶಾಸಕರ ಸಂಖ್ಯೆ 126ಕ್ಕೆ ಏರಿಕೆಯಾಗುತ್ತದೆ. ಅಧಿಕಾರ ಗದ್ದುಗೆ ಏರಲು ಆಗ ಬಿಜೆಪಿ ಅರ್ಹತೆ ಹೊಂದುತ್ತದೆ. ಆದರೆ, ರಾಜೀನಾಮೆ ಅಂಗೀಕಾರವಾದ ನಂತರವೇ ಈ ಎಲ್ಲಾ ಬೆಳವಣಿಗೆ ಸಾಧ್ಯ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪಕ್ಷಗಳ ಬಲಾಬಲ

ಒಟ್ಟು ಶಾಸಕರ ಸಂಖ್ಯೆ 230

ಕಾಂಗ್ರೆಸ್ (ಆಡಳಿತ ಪಕ್ಷ)-114
ಬಿಎಸ್‌‌ಪಿ - 2
ಎಸ್‌‌ಪಿ - 1
ಐಎನ್ ಡಿ - 4
ಒಟ್ಟು 121

ಖಾಲಿ - 2

ಬಿಜೆಪಿ (ವಿರೋಧಪಕ್ಷ) - 107
ಒಟ್ಟು-230

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.