ADVERTISEMENT

ಭಾರತವನ್ನು ರೂಪಿಸಿದ ಮೊಘಲರ ಬಗ್ಗೆ ಹೆಮ್ಮೆಯಿದೆ: ಕಾಂಗ್ರೆಸ್ ಸಂಸದ ಅಬ್ದುಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2022, 10:43 IST
Last Updated 30 ಆಗಸ್ಟ್ 2022, 10:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುವಾಹಟಿ: ಭಾರತವನ್ನು ರೂಪಿಸಿದ್ದು ಮತ್ತು ಹಿಂದುಸ್ಥಾನವನ್ನಾಗಿಸಿದ್ದು ಮೊಘಲರು. ಹೀಗಾಗಿ ಅವರ ಬಗ್ಗೆ ಹೆಮ್ಮೆ ಇದೆ ಎಂದು ಕಾಂಗ್ರೆಸ್ ಸಂಸದ ಅಬ್ದುಲ್ ಖಾಲಿಕ್ ಹೇಳಿದ್ದಾರೆ.

‘ಸಣ್ಣ ರಾಜ್ಯಗಳಾಗಿ (ರಾಜರ) ವಿಂಗಡಿಸಲಾಗಿದ್ದ ಭಾರತಕ್ಕೆ ಹಿಂದುಸ್ಥಾನದ ರೂಪವನ್ನು ನೀಡಲಾಯಿತು. ಹೀಗಾಗಿ ನನಗೆ ಮೊಘಲರ ಬಗ್ಗೆ ಹೆಮ್ಮೆ ಇದೆ. ಹಾಗೆಂದು ನಾನು ಮೊಘಲನಲ್ಲ. ಅವರ ವಂಶಸ್ಥನೂ ಅಲ್ಲ. ಅವರು ಭಾರತಕ್ಕೆ ರೂಪ ಕೊಟ್ಟರು. ಹಿಂದುಸ್ಥಾನ ಎಂಬ ಹೆಸರು ಕೊಟ್ಟರು. ಹೀಗಾಗಿ ಅವರ ಕುರಿತು ಹೆಮ್ಮೆಯಿದೆ’ ಎಂದು ಅಬ್ದುಲ್ ಹೇಳಿದ್ದಾರೆ.

ಅಬ್ದುಲ್ ಅವರು ಮೊಘಲರ ಕುರಿತು ನೀಡಿರುವ ಹೇಳಿಕೆಯ ವಿಡಿಯೊ ತುಣುಕನ್ನು ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಅಬ್ದುಲ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

‘ಮೊಘಲರು ಬರುವ ಮೊದಲು ಭಾರತವರ್ಷವೇ ಇರಲಿಲ್ಲ ಎಂಬುದಾಗಿ ಹಿಂದು ವಿರೋಧಿ ಕಾಂಗ್ರೆಸ್ ಭಾವಿಸಿದೆ’ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ನಿಮ್ಮ ಮೊಘಲರನ್ನು ಬುಡಸಮೇತ ಒದ್ದೋಡಿಸಿದ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.