ADVERTISEMENT

ಮತದಾರರ ಪಟ್ಟಿ ಸಮಗ್ರ ಪರಿಶೀಲನೆ: ದೇಶದುದ್ದಕ್ಕೂ ವಿಸ್ತರಿಸದಿರಿ; ECಗೆ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 15:58 IST
Last Updated 12 ಜುಲೈ 2025, 15:58 IST
<div class="paragraphs"><p>ಚುನಾವಣಾ ಆಯೋಗ</p></div>

ಚುನಾವಣಾ ಆಯೋಗ

   

ಪಿಟಿಐ ಚಿತ್ರ

ನವದೆಹಲಿ: ‘ಬಿಹಾರದಲ್ಲಿ ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸುವ ಕಾರ್ಯವನ್ನು ದೇಶದುದ್ದಕ್ಕೂ ವಿಸ್ತರಿಸಬಾರದು’ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಶನಿವಾರ ಆಗ್ರಹಿಸಿದೆ.

ADVERTISEMENT

ಮತದಾರರ ಪಟ್ಟಿಯ ಸಮಗ್ರ ‍ಪರಿಶೀಲನೆ ಕಾರ್ಯವನ್ನು ದೇಶದಾದ್ಯಂತ ವಿಸ್ತರಿಸಲು ಚುನಾವಣಾ ಆಯೋಗವು ಕೆಲಸ ಆರಂಭಿಸಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿನ ಆಯೋಗದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂಬ ವರದಿಗಳೂ ಇವೆ.

‘ಬಿಜೆಪಿ ನಿಯಂತ್ರಣ’ದಲ್ಲಿ ಇರುವ ಆಯೋಗದ ಈ ಕ್ರಮವು, ದೇಶದ ಜನರನ್ನು ಅನುಮಾನದಿಂದ ನೋಡುವ, ಮತದಾನದ ಹಕ್ಕಿಗೆ ಬೆದರಿಕೆ ಒಡ್ಡುವ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುವಂತೆ ಮಾಡುತ್ತದೆ’ ಎಂದು ಪಕ್ಷ ಆರೋಪಿಸಿದೆ.

‘ಸಮಗ್ರ ಪರಿಶೀಲನೆ ವೇಳೆ ಆಧಾರ್‌ ಕಾರ್ಡ್‌, ಮತದಾರರ ಚೀಟಿ ಮತ್ತು ಪಡಿತರ ಚೀಟಿಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿರುವ ಸ್ಪಷ್ಟ ಆದೇಶವನ್ನು ಆಯೋಗವು ನಿರಾಕರಿಸುವಂತಿಲ್ಲ’ ಎಂದೂ ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.