ADVERTISEMENT

Vote Chori | ಮತಗಳ್ಳತನ ವಿರುದ್ಧ ಧ್ವನಿ ಎತ್ತಲು ಜನರಿಗೆ ರಾಹುಲ್, ಖರ್ಗೆ ಮನವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2025, 9:29 IST
Last Updated 13 ಆಗಸ್ಟ್ 2025, 9:29 IST
<div class="paragraphs"><p>ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ</p></div>

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ

   

ನವದೆಹಲಿ: ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೊಸ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ವಿಡಿಯೊವನ್ನು ಹಂಚಿಕೊಂಡಿದ್ದು, ಮತ ಕಳ್ಳತನ ವಿರುದ್ಧ ಜನರು ಧ್ವನಿ ಎತ್ತುವಂತೆ ವಿನಂತಿ ಮಾಡಿದ್ದಾರೆ.

ADVERTISEMENT

ಮತ ಕಳ್ಳತನ ಆರೋಪ ಸಂಬಂಧ ಕಾಂಗ್ರೆಸ್ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಬಿಜೆಪಿಯ ಹಿಡಿತದಿಂದ ಸಾಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸುವಂತೆ ಕೇಳಿಕೊಂಡಿದೆ.

'ನಿಮ್ಮ ಮತದ ಕಳ್ಳತನ, ನಿಮ್ಮ ಹಕ್ಕುಗಳ ಕಳ್ಳತನ ಹಾಗೂ ನಿಮ್ಮ ಗುರುತಿನ ಕಳ್ಳತನ' ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ರಾಹುಲ್ ಪೋಸ್ಟ್ ಮಾಡಿದ್ದಾರೆ.

ಇದೇ ವಿಡಿಯೊವನ್ನು ಹಂಚಿಕೊಂಡಿರುವ ಖರ್ಗೆ, 'ನಿಮ್ಮ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಡಬೇಡಿ, ಈ ಬಾರಿ ಪ್ರಶ್ನೆಗಳನ್ನು ಎತ್ತಿ, ಉತ್ತರಗಳನ್ನು ಕೇಳಿ. ಮತ ಕಳ್ಳತನದ ವಿರುದ್ಧ ನಿಮ್ಮ ಧ್ವನಿಯನ್ನು ಎತ್ತಿ, ಬಿಜೆಪಿ ಹಿಡಿತದಿಂದ ಸಂವಿಧಾನಿಕ ಸಂಸ್ಥೆಗಳನ್ನು ರಕ್ಷಿಸಿ' ಎಂದು ಮನವಿ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್‌ನ ಇತರೆ ನಾಯಕರು ಸಹ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.