ADVERTISEMENT

ಒಂದೂವರೆ ವರ್ಷದ ಬಳಿಕ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಇಂದು

ಪಿಟಿಐ
Published 15 ಅಕ್ಟೋಬರ್ 2021, 20:25 IST
Last Updated 15 ಅಕ್ಟೋಬರ್ 2021, 20:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೊರೊನಾ ಕಾರಣದಿಂದ ನಡೆಯದಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯೂಸಿ) ಸಭೆಒಂದೂವರೆ ವರ್ಷದ ಬಳಿಕ ಶನಿವಾರ ನಡೆಯಲಿದೆ.

ಪಕ್ಷದ ಅಧ್ಯಕ್ಷ ಸ್ಥಾನವೂ ಒಳಗೊಂಡಂತೆ ಎಲ್ಲ ಪದಾಧಿಕಾರಿಗಳ ಹುದ್ದೆಯ ಆಯ್ಕೆಗೆ ಸಾಂಸ್ಥಿಕ ಚುನಾವಣೆ ನಡೆಸುವಂತೆ ಅನೇಕ ಹಿರಿಯ ಮುಖಂಡರು ಸಲ್ಲಿಸಿರುವ ಬೇಡಿಕೆಯ ಕುರಿತೂ ಚರ್ಚೆ ನಡೆಯುವ ಸಾಧ್ಯತೆ ಇದೆ.

ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಹಾಗೂ ಮಣಿಪುರ ವಿಧಾನಸಭೆಗಳಿಗೆ ಮುಂದಿನ ವರ್ಷದ ಆರಂಭಕ್ಕೆ ಮೊದಲೇ ನಾಯಕತ್ವದ ನಿರ್ಧಾರ ಆಗಬೇಕಿದೆ. ಈ ಐದು ರಾಜ್ಯಗಳಲ್ಲಿ ಪಕ್ಷವು ಸುಧಾರಣೆ ಕಾಣಬೇಕಿದ್ದಲ್ಲಿ ನಾಯಕತ್ವದ ಅಂಶದ ಕುರಿತು ವರಿಷ್ಠರು ಗಮನ ಹರಿಸುವುದುದು ಸೂಕ್ತ ಎಂಬ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಬಹುದು ಎಂದು ಮೂಲಗಳು ಹೇಳಿವೆ.

ADVERTISEMENT

ಸಾಂಸ್ಥಿಕ ಚುನಾವಣೆ ನಡೆಸುವ ಕುರಿತು ಸ್ಪಷ್ಟತೆ ಇಲ್ಲ. ಮುಖಂಡರಾದ ಕಮಲನಾಥ್ ಅಥವಾ ಸಚಿನ್ ಪೈಲಟ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿ ನೇಮಿಸಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಸಾಂಸ್ಥಿಕ ಚುನಾವಣೆ ನಡೆಸುವವರೆಗೂ ಸೋನಿಯಾ ಗಾಂಧಿ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂಬ ಬೇಡಿಕೆ ಯನ್ನು ಸಭೆಯಲ್ಲಿ ಮತ್ತೊಂದು ವರ್ಗ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಸ್ತುತ ರಾಜಕೀಯ ಬೆಳವಣಿಗೆ, ವಿವಿಧ ರಾಜ್ಯಗಳಲ್ಲಿನ ಪಕ್ಷದ ಸ್ಥಿತಿಗತಿ, ವಿಧಾನಸಭೆ ಚುನಾವಣೆಗಳ ಕುರಿತು ಪ್ರಮುಖವಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.