ADVERTISEMENT

ಆನ್‌ಲೈನ್‌ ತರಗತಿ ಮಾರ್ಗಸೂಚಿ ಸಿದ್ಧಪಡಿಸಲು ಕಾರ್ಯಪಡೆ ರಚಿಸಿ: ಅಹ್ಮದ್‌ ಪಟೇಲ್

ಪಿಟಿಐ
Published 19 ಸೆಪ್ಟೆಂಬರ್ 2020, 11:23 IST
Last Updated 19 ಸೆಪ್ಟೆಂಬರ್ 2020, 11:23 IST
ಅಹ್ಮದ್‌ ಪಟೇಲ್‌
ಅಹ್ಮದ್‌ ಪಟೇಲ್‌   

ನವದೆಹಲಿ: ಶಾಲಾ ಮಕ್ಕಳಿಗೆ ಆನ್‌ಲೈನ್‌ ತರಗತಿ ನಡೆಸುವುದಕ್ಕೆ ಮಾರ್ಗಸೂಚಿಗಳನ್ನು ರೂಪಿಸಲುಕಾರ್ಯಪಡೆಯೊಂದನ್ನು ರಚಿಸಬೇಕು ಎಂದು ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಅಹ್ಮದ್‌ ಪಟೇಲ್‌ ಶನಿವಾರ ಆಗ್ರಹಿಸಿದ್ದಾರೆ.

ಶೂನ್ಯವೇಳೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಪಟೇಲ್‌, ‘ಕಂಪ್ಯೂಟರ್‌ ಹಾಗೂ ಸ್ಮಾರ್ಟ್‌ಫೋನ್‌ ಸೌಲಭ್ಯವಿಲ್ಲದ ಸಮಾಜದಲ್ಲಿನ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರ ಸೂಕ್ತ ನೆರವು ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಆನ್‌ಲೈನ್‌ ತರಗತಿಗಳು ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ, ಯಾವ ರೀತಿಯಲ್ಲಿ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿದೆ ಎನ್ನುವ ಕುರಿತು ಅಧ್ಯಯನ ನಡೆಸಲು ಕಾರ್ಯಪಡೆ ರಚಿಸಬೇಕು. ರಾಜ್ಯಗಳ ಜೊತೆ ಚರ್ಚಿಸಿ ಆನ್‌ಲೈನ್‌ ತರಗತಿಗಳನ್ನು ನಡೆಸುವುದಕ್ಕೆ ರಾಷ್ಟ್ರೀಯ ಮಟ್ಟದ ನಿಯಮಾವಳಿಗಳನ್ನು ಸರ್ಕಾರ ರಚಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.