ನವದೆಹಲಿ: 2020ರ ಮಾರ್ಚ್‌ನ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಾಪಿಸಿದ ‘ಪಿಎಂ ಕೇರ್ಸ್’ ಎಂಬ ಚಾರಿಟೆಬಲ್ ಟ್ರಸ್ಟ್‌ನಲ್ಲಿ ಸಂಗ್ರಹವಾಗುತ್ತಿರುವ ಹಣವು ವರ್ಷದಿಂದ ವರ್ಷಕ್ಕೇ ತೀವ್ರ ಕುಸಿತ ಕಾಣುತ್ತಿದೆ. ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ದೇಣಿಗೆ ನೀಡುತ್ತಿರುವ ಪ್ರಮಾಣವು ಕುಸಿತ ಕಂಡಿದ್ದರೆ, ವಿದೇಶಿಯರು ನೀಡುತ್ತಿರುವ ದೇಣಿಗೆ ಪ್ರಮಾಣವಂತೂ ತೀವ್ರ ಕುಸಿತ ಕಂಡಿದೆ. ‘ಪಿಎಂ ಕೇರ್ಸ್’ ವೆಬ್‌ಸೈಟ್‌ನಲ್ಲಿ ನೀಡಲಾಗಿದ್ದ ಆದಾಯ ಹಾಗೂ ಖರ್ಚುಗಳ ವರದಿಗಳನ್ನು ಇಟ್ಟುಕೊಂಡು ಆಡಿಟ್ ವರದಿಯೊಂದನ್ನು ಬಿಡುಗಡೆ ಮಾಡಲಾಗಿದೆ. ವೆಬ್‌ಸೈಟ್‌ನಲ್ಲಿ 2022–23ರ ಅವಧಿಯವರೆಗಿನ ಮಾಹಿತಿ ಮಾತ್ರ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.