ADVERTISEMENT

ಹಿಮಾಚಲ ಪ್ರದೇಶ ಲಾಕ್‌ಡೌನ್: ಆಹಾರ ಹುಡುಕಿ ಹಳ್ಳಿಗಳತ್ತ ಮಂಗಗಳ ದೌಡು

ಏಜೆನ್ಸೀಸ್
Published 8 ಏಪ್ರಿಲ್ 2020, 7:48 IST
Last Updated 8 ಏಪ್ರಿಲ್ 2020, 7:48 IST
ಹಿಮಾಚಲ ಪ್ರದೇಶದಲ್ಲಿ ಮಂಗಗಳ ವಲಸೆ
ಹಿಮಾಚಲ ಪ್ರದೇಶದಲ್ಲಿ ಮಂಗಗಳ ವಲಸೆ   

ಹಿಮಾಚಲ ಪ್ರದೇಶ: ಲಾಕ್‌‌ಡೌನ್‌‌ನಿಂದಾಗಿ ಜನರಿಗಷ್ಟೇ ಅಲ್ಲ ಪ್ರಾಣಿ ಪಕ್ಷಿ ಸಂಕುಲಕ್ಕೂ ಆಹಾರದ ತೊಂದರೆ ಎದುರಾಗಿದ್ದು, ಹಿಮಾಚಲ ಪ್ರದೇಶದ ಹಲವು ನಗರಗಳಿಂದ ಮಂಗಗಳು ಆಹಾರಕ್ಕಾಗಿ ಕಾಡು ಹಾಗೂ ಗ್ರಾಮೀಣ ಪ್ರದೇಶಗಳತ್ತ ವಲಸೆ ಆರಂಭಿಸಿವೆ.

ಈ ಸಂಬಂಧ ಎಎನ್ಐ ಪ್ರಕಟಿಸಿರುವ ವಿಡಿಯೋ ತುಣುಕು ಸಾಕ್ಷಿಯಾಗಿದೆ.ಹಿಂದೆಂದೂ ಕಂಡಿರದಷ್ಟು ಮಂಗಗಳ ಗುಂಪು ಈಗ ಹಿಮಾಚಲ ಪ್ರದೇಶದಲ್ಲಿ ಕಂಡು ಬಂದಿದೆ.

ಇವು ನಗರ ಪ್ರದೇಶಗಳಲ್ಲಿ ಆಹಾರ ಸಿಗದೆ ಹಳ್ಳಿಗಳತ್ತ ಹಾಗೂ ಅರಣ್ಯದತ್ತ ಧಾವಿಸುತ್ತಿವೆ.ಹಳ್ಳಿಗಳಲ್ಲಿ ಸಿಕ್ಕಿದಷ್ಟು ಆಹಾರ ತಿನ್ನುತ್ತಾ ಮುಂದಿನ ಊರಿನತ್ತ ಪ್ರಯಾಣ ಬೆಳೆಸುತ್ತಿವೆ. ಕೆಲವು ಗ್ರಾಮಗಳಲ್ಲಿ ಜನರು ಬಾಗಿಲು ಮುಚ್ಚಿಕೊಂಡು ಮನೆಯಲ್ಲಿದ್ದರೂ ಆಹಾರಕ್ಕಾಗಿ ಮಂಗಗಳು ಮನೆಯ ಬಳಿಯೇ ಸುಳಿದಾಡುತ್ತಿವೆ.

ಕೆಲ ಗ್ರಾಮಗಳಲ್ಲಿ ಮಂಗಗಳಿಗಾಗಿಯೇ ಆಹಾರ ಕೊಡುತ್ತಿರುವ ಜನರು ಮಾನವೀಯತೆ ಮೆರೆಯುತ್ತಿದ್ದಾರೆ.ಲಾಕ್ ಡೌನ್‌‌ನಿಂದಾಗಿ ದೇಶದಾದ್ಯಂತ ಜನರು ಮನೆಯೊಳಗೇ ಬಂಧಿಗಳಾಗಿದ್ದರೆ, ಕಾಡು ಪ್ರಾಣಿಗಳುಪಟ್ಟಣಗಳತ್ತ ಬರುತ್ತಿವೆ. ಹಿಮಾಚಲ ಪ್ರದೇಶದಲ್ಲಿ ಮಂಗಗಳುನಗರದಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.