ADVERTISEMENT

Covid-19 India Update: ಮುಂಬೈ ನಗರವೊಂದರಲ್ಲೇ 1.69 ಲಕ್ಷ ಕೊರೊನಾ ಪ್ರಕರಣ

ಏಜೆನ್ಸೀಸ್
Published 13 ಸೆಪ್ಟೆಂಬರ್ 2020, 16:12 IST
Last Updated 13 ಸೆಪ್ಟೆಂಬರ್ 2020, 16:12 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಇಲ್ಲಿವರೆಗೆ ಮುಂಬೈ ನಗರವೊಂದರಲ್ಲೇ 8,147 ಮಂದಿ ಮೃತಪಟ್ಟಿದ್ದು, ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 1,69,693ಕ್ಕೆ ಏರಿದೆ ಎಂದು ಮಹಾನಗರ ಪಾಲಿಕೆ ಮಾಹಿತಿ ನೀಡಿದೆ.

ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 47.54 ಲಕ್ಷದ ಗಡಿ ದಾಟಿದೆ. ಮೃತರ ಸಂಖ್ಯೆಯು 78,586ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.60ರಷ್ಟು ಪ್ರಕರಣಗಳು ಐದು ರಾಜ್ಯಗಳಲ್ಲಿ ದಾಖಲಾಗಿವೆ.

ADVERTISEMENT

ಮಹಾರಾಷ್ಟ್ರದಲ್ಲಿ(ಶೇ.28.79), ಕರ್ನಾಟಕದಲ್ಲಿ (ಶೇ.10.05), ಆಂಧ್ರ ಪ್ರದೇಶದಲ್ಲಿ(ಶೇ.9.84), ಉತ್ತರ ಪ್ರದೇಶದಲ್ಲಿ(ಶೇ.6.98), ತಮಿಳುನಾಡಿನಲ್ಲಿ(ಶೇ.4.84) ಕೊರೊನಾ ಪ್ರಕರಣಗಳು ವರದಿಯಾಗಿವೆ.

ದೇಶದಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣವೂ ಈ ಐದು ರಾಜ್ಯಗಳಲ್ಲೇ ಹೆಚ್ಚಾಗಿದೆ.

ಮಹಾರಾಷ್ಟ್ರದಲ್ಲಿ (ಶೇ.17.2), ತಮಿಳುನಾಡಿನಲ್ಲಿ (ಶೇ. 13.1), ಆಂಧ್ರಪ್ರದೇಶದಲ್ಲಿ (ಶೇ. 12.2), ಕರ್ನಾಟಕದಲ್ಲಿ (ಶೇ. 7.9) ಮತ್ತು ಉತ್ತರಪ್ರದೇಶದಲ್ಲಿ (ಶೇ. 7.8) ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶದಾದ್ಯಂತ ಚೇತರಿಸಿಕೊಂಡವರ ಪ್ರಮಾಣ ಶೇ.77.88ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.