ADVERTISEMENT

ಭೋಪಾಲ್‌: 20 ಬೋಗಿಗಳ ಕೋವಿಡ್‌ ಐಸೊಲೇಷನ್‌ ಕೇಂದ್ರ ಸಿದ್ಧ

ಪಿಟಿಐ
Published 24 ಏಪ್ರಿಲ್ 2021, 8:42 IST
Last Updated 24 ಏಪ್ರಿಲ್ 2021, 8:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭೋಪಾಲ್‌: ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ ನಡುವೆ, ಆಸ್ಪತ್ರೆಗಳಲ್ಲಿ ಉಂಟಾಗುತ್ತಿರುವ ಹಾಸಿಗೆಗಳ ಕೊರತೆಯನ್ನು ನೀಗಿಸುವುದಕ್ಕಾಗಿ ಪಶ್ಚಿಮ –ಮಧ್ಯ ರೈಲ್ವೆ ವಿಭಾಗ ಭೋಪಾಲ್‌ ರೈಲು ನಿಲ್ದಾಣದಲ್ಲಿ 20 ಐಸೊಲೇಷನ್‌ ಬೋಗಿಗಳನ್ನು ಸಿದ್ಧಗೊಳಿಸಿದ್ದು, ಇವುಗಳು ಭಾನುವಾರದಿಂದ ಕಾರ್ಯಾರಂಭ ಮಾಡಲಿವೆ.

‘ಭೋಪಾಲ್‌ ರೈಲು ನಿಲ್ದಾಣದ 6ನೇ ಪ್ಲಾಟ್‌ಫಾರಂನಲ್ಲಿರುವ ಈ ಬೋಗಿಗಳಲ್ಲಿ 320 ಹಾಸಿಗೆಗಳಿವೆ‘ ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಶನಿವಾರ ಟ್ವೀಟ್ ಮಾಡಿದ್ದಾರೆ.

‘ಇವು ಕೇವಲ ಐಸೊಲೇಷನ್ ಕೇಂದ್ರಗಳಾಗಿದ್ದು, ಇವುಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಮಾಡಿಲ್ಲ. ಆಮ್ಲಜನಕದ ನೆರವು ಅಗತ್ಯವಿರುವ ಕೋವಿಡ್ ಸೋಂಕಿತರನ್ನು ಇಲ್ಲಿಗೆ ದಾಖಲಿಸಲು ಅವಕಾಶವಿಲ್ಲ‘ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಮಧ್ಯಪ್ರದೇಶದಲ್ಲಿ ಶುಕ್ರವಾರ ಒಂದೇ ದಿನ 13,590 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಪ್ರಮಾಣ 4,72,785ಕ್ಕೆ ಏರಿದೆ. ಇಲ್ಲಿವರೆಗೆ ಕೋವಿಡ್‌ನಿಂದ 4,937 ಮಂದಿ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.