ADVERTISEMENT

ನಿಜಾಮುದ್ದೀನ್ ಮರ್ಕಜ್‌‌ನಲ್ಲಿ ಭಾಗವಹಿಸಿದ್ದ 294 ವಿದೇಶಿಯರ ವಿರುದ್ಧ ಆರೋಪ ಪಟ್ಟಿ

ಪಿಟಿಐ
Published 27 ಮೇ 2020, 11:08 IST
Last Updated 27 ಮೇ 2020, 11:08 IST
ಪ್ರಾತಿನಿಧಿಕ ಚಿತ್ರ (ಎಎಫ್‌ಪಿ)
ಪ್ರಾತಿನಿಧಿಕ ಚಿತ್ರ (ಎಎಫ್‌ಪಿ)   

ನವದೆಹಲಿ: ದೆಹಲಿಯ ನಿಜಾಮುದ್ದೀನ್ ಮರ್ಕಜ್‌ ಧಾರ್ಮಿಕ ಸಭೆಯಲ್ಲಿಭಾಗವಹಿಸಿದ್ದ 294 ವಿದೇಶಿಯರ ವಿರುದ್ಧ ದೆಹಲಿ ಪೊಲೀಸರು ಹೊಸತಾಗಿ15 ಆರೋಪ ಪಟ್ಟಿ ದಾಖಲಿಸಲಿದ್ದಾರೆ. ದೇಶದಲ್ಲಿ ಕೊರೊನಾವೈರಸ್ ಸೋಂಕು ವ್ಯಾಪಿಸುತ್ತಿರುವ ಹೊತ್ತಲ್ಲಿ ಇವರು ವೀಸಾ ನಿಯಮ ಉಲ್ಲಂಘಿಸಿ, ಮಿಷನರಿ ಕೆಲಸಗಳಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಮಲೇಷ್ಯಾ, ಥಾಯ್ಲೆಂಡ್, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮತ್ತು ಹಲವಾರು ಆಫ್ರಿಕನ್ ರಾಷ್ಟ್ರಗಳು ಸೇರಿದಂತೆ 14 ದೇಶಗಳಿಂದ ಬಂದ 294 ವಿದೇಶಿಯರ ವಿರುದ್ಧ ಸಾಕೇತ್ ಕೋರ್ಟ್‌ನಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಮಂಗಳವಾರ 82 ವಿದೇಶಿಯರ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿತ್ತು.

ಮಾರ್ಚ್ ತಿಂಗಳಲ್ಲಿ ನಿಜಾಮುದ್ದೀನ್ ಪ್ರದೇಶದಲ್ಲಿ ತಬ್ಲೀಗಿ ಜಮಾತ್ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಹಲವರಿಗೆ ಕೊರೊನಾವೈರಸ್ ಸೋಂಕು ಕಂಡು ಬಂದಿತ್ತು. ಸೋಂಕು ತಗುಲಿದ್ದ ಕೆಲವರು ಅವರವರ ರಾಜ್ಯಕ್ಕೆ ಮರಳಿದ್ದರಿಂದ ಅವರ ಮೂಲಕ ಇತರರಿಗೂ ಸೋಂಕು ಹರಡಿತ್ತು. ಇಲ್ಲಿ ಭಾಗವಹಿಸಿದ್ದ 25,500 ತಬ್ಲೀಗಿ ಸದಸ್ಯರು ಮತ್ತು ಅವರ ಒಡನಾಡಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.