ADVERTISEMENT

Covid-19 India Update: ಮುಂಬೈನಲ್ಲಿ 1,311 ಹೊಸ ಪ್ರಕರಣ, 50,000 ಸೋಂಕಿತರು

ಒಂದೇ ದಿನ 10 ಸಾವಿರ ಕೋವಿಡ್ ಪ್ರಕರಣ

ಪಿಟಿಐ
Published 8 ಜೂನ್ 2020, 16:30 IST
Last Updated 8 ಜೂನ್ 2020, 16:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಾದ್ಯಂತ 124981 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 124429 ಮಂದಿ ಚೇತರಿಸಿಕೊಂಡಿದ್ದು 7200 ಮಂದಿ ಸಾವಿಗೀಡಾಗಿದ್ದಾರೆ.

ದೆಹಲಿಯಲ್ಲಿ ಮೇ 30ರಿಂದ ಜೂನ್ 6ರವರೆಗೆ 62 ಮಂದಿ ಸಾವಿಗೀಡಾಗಿದ್ದಾರೆ. ಜೂನ್ 5ರಂದು 27 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 1007 ಹೊಸ ಪ್ರಕರಣಗಳು ಇಂದು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 29943ಕ್ಕೇರಿದೆ.

ರಾಜಸ್ಥಾನದಲ್ಲಿ ಸೋಮವಾರ 277 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು , 6 ಮಂದಿ ಸಾವಿಗೀಡಾಗಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ 10876 ಮಂದಿಗೆ ಸೋಂಕು ತಗುಲಿದ್ದು 246 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ 198 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 4285 ಆಗಿದೆ.

ಮುಂಬೈನಲ್ಲಿ 1,311 ಹೊಸ ಪ್ರಕರಣಗಳು ವರದಿಯಾಗಿದ್ದು ಪ್ರಕರಣಗಳ ಸಂಖ್ಯೆ 50,000ಕ್ಕೇರಿದೆ.

ಗುಜರಾತ್‌ನಲ್ಲಿ ಒಂದೇ ದಿನ 477 ಹೊಸ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಸಂಖ್ಯೆ 20574 ಆಗಿದೆ. 31 ಮಂದಿ ಸಾವಿಗೀಡಾಗಿದ್ದು ಮೃತರ ಸಂಖ್ಯೆ 1,280 ಆಗಿದೆ.

ಹರಿಯಾಣದಲ್ಲಿ 406 ಹೊಸ ಪ್ರಕರಣಗಳು ವರದಿಯಾಗಿದ್ದು ಈ ಪೈಕಿ ಗುರುಗ್ರಾಮದಲ್ಲಿ 243 ಪ್ರಕರಣಗಳಿವೆ. ಇಲ್ಲಿಯವರೆಗೆ 39 ಮಂದಿ ಸಾವಿಗೀಡಾಗಿದ್ದಾರೆ, ಒಟ್ಟು 4854 ಪ್ರಕರಣಗಳಲ್ಲಿ 3115 ಪ್ರಕರಣಗಳು ಸಕ್ರಿಯವಾಗಿವೆ.

ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2,553 ಏರಿಕೆ ಆಗಿದ್ದು ಒಟ್ಟು ಸೋಂಕಿತರ ಸಂಖ್ಯೆ 88528 ಆಗಿದೆ. ಒಂದೇ ದಿನ 109 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 3,169 ಆಗಿದೆ.

ಮಣಿಪುರದಲ್ಲಿ 63 ಹೊಸ ಪ್ರಕರಣಗಳು ಇಂದು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 272 ಆಗಿದೆ.
ತಮಿಳುನಾಡಿನಲ್ಲಿ 1,562 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ರೋಗಿಗಳ ಸಂಖ್ಯೆ 33,229ಕ್ಕೆ ತಲುಪಿದೆ.17 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 286 ಆಗಿದೆ.
ಪಂಜಾಬ್‌ನಲ್ಲಿ 55 ಹೊಸ ಪ್ರಕರಣ ಪತ್ತೆಯಾಗಿದ್ದು ಪಾಸಿಟಿವ್ ಪ್ರಕರಣಗಳ ಸಂಖ್ಯೆ 2663 ಆಗಿದೆ ಎಂದು ಪಂಜಾಬ್ ಆರೋಗ್ಯ ಇಲಾಖೆ ಹೇಳಿದೆ.
ಅಸ್ಸಾಂನಲ್ಲಿ 95 ಪಾಸಿಟಿವ್ ಪ್ರಕರಣಗಳು ವರದಿ ಆಗಿದ್ದು ಒಟ್ಟು ಸೋಂಕಿತರ ಸಂಖ್ಯೆ 2776 ಆಗಿದೆ ಎಂದು ಅಸ್ಸಾಂ ಸಚಿವ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ.

ಧಾರಾವಿಯಲ್ಲಿ 71 ಮಂದಿ ಸಾವಿಗೀಡಾಗಿದ್ದು ಪ್ರಕರಣಗಳ ಸಂಖ್ಯೆ 1924 ಆಗಿದೆ ಎಂದು ಬಿಎಂಸಿ ಹೇಳಿದೆ.
ಆಂಧ್ರಪ್ರದೇಶದಲ್ಲಿ 154 ಹೊಸ ಪ್ರಕರಣಗಳಿದ್ದು ಒಟ್ಟು ಸೋಂಕಿತರ ಸಂಖ್ಯೆ 4,813 ಆಗಿದೆ.
ಹಿಮಾಚಲ ಪ್ರದೇಶದಲ್ಲಿ 414 ಮಂದಿಗೆ ಸೋಂಕು ತಗುಲಿದ್ದು 183 ಸಕ್ರಿಯ ಪ್ರಕರಣಗಳಿವೆ. 222 ಮಂದಿ ಚೇತರಿಸಿಕೊಂಡಿದ್ದು 5 ಮಂದಿ ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಕೇರಳದಲ್ಲಿ ಇವತ್ತು ಒಬ್ಬ ರೋಗಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 16ಕ್ಕೇರಿದೆ. 91 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 2004 ಆಗಿದೆ. 1174 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ 411 ಹೊಸ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಸಂಖ್ಯೆ 10,947 ಆಗಿದೆ. 8 ಮಂದಿ ಸೋಮವಾರ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 283 ಆಗಿದೆ.

ಸೆಪ್ಟೆಂಬರ್ ನಂತರ ಇಳಿಕೆ:‌ದೇಶದಲ್ಲಿ ಪತ್ತೆಯಾಗುತ್ತಿರುವ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಪ್ರತಿದಿನ ತೀವ್ರವಾಗಿ ಏರುತ್ತಿದೆ. ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಪ್ರತಿದಿನ ಪತ್ತೆಯಾಗುವ ಹೊಸ ಪ್ರಕರಣಗಳ ಸಂಖ್ಯೆ ಇನ್ನಷ್ಟುಹೆಚ್ಚಲಿದೆ. ಸೆಪ್ಟೆಂಬರ್ ಮಧ್ಯಭಾಗದ ನಂತರ ಈ ಸಂಖ್ಯೆಯಲ್ಲಿ ಇಳಿಕೆ ಆಗಬಹುದು ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ವೈದ್ಯಾಧಿಕಾರಿಗಳು ನಡೆಸಿರುವ ಅಧ್ಯಯನದ ವರದಿಯು, ‘ಎಪಿಡೆಮಿಯಾಲಜಿ ಇಂಟರ್‌ನ್ಯಾಷನಲ್’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

‘ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು ಇರಬೇಕು. ಆನಂತರ ಸೋಂಕು ಹರಡುವುದು ಕಡಿಮೆಯಾಗುತ್ತಾ ಬರುತ್ತದೆ. ಈಗ ದೇಶದಲ್ಲಿ ಗುಣಮುಖರಾದವರ ಸಂಖ್ಯೆಗಿಂತ ಸಕ್ರಿಯ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಮೃತಪಟ್ಟವರ ಸಂಖ್ಯೆಯನ್ನೂ ಇದಕ್ಕೆ ಸೇರಿಸಿಕೊಂಡರೆ, ಈ ಅಂತರ 8 ಸಾವಿರದ ಗಡಿ ದಾಟುತ್ತದೆ. ಸದ್ಯದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣವನ್ನು ಗಮನಿಸಿದರೆ, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಹಿಂದಿಕ್ಕಲು ಇನ್ನೂ ಮೂರೂವರೆ ತಿಂಗಳು ಬೇಕಾಗುತ್ತದೆ. ಆನಂತರವಷ್ಟೇ ಸೋಂಕಿತರ ಸಂಖ್ಯೆ ಇಳಿಕೆಯಾಗುವ ಸಾಧ್ಯತೆ ಇದೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಲಸಿಕೆ ತಯಾರಿಕೆ ಆರಂಭ:ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿರುವ ಕೋವಿಡ್–19 ನಿರೋಧಕ ಲಸಿಕೆಯ ತಯಾರಿಕೆಯನ್ನು ಆಸ್ಟ್ರಾಜೆನಿಕಾ ಕಂಪನಿ ಆರಂಭಿಸಿದೆ. ಸೆಪ್ಟೆಂಬರ್ ವೇಳೆಗೆ ಈ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಾಗಬಹುದು ಎಂದು ಬಿಬಿಸಿ ರೇಡಿಯೊ ವರದಿ ಮಾಡಿದೆ.

ಭಾರತದಲ್ಲಿ ಜೂನ್ ತಿಂಗಳ ಮೊದಲ ಏಳು ದಿನಗಳಲ್ಲಿ 60 ಸಾವಿರಕ್ಕೂ ಹೆಚ್ಚು ಹೊಸ ಕೋವಿಡ್–19 ಪ್ರಕರಣಗಳು ಪತ್ತೆಯಾಗಿವೆ. ಪ್ರತಿದಿನ ಸರಾಸರಿ 8,550 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಐದು ದಿನಗಳಲ್ಲಿ ಪ್ರತಿದಿನ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇದೇ ವೇಗದಲ್ಲಿ ಮುಂದುವರಿದರೆ 3–4 ದಿನಗಳಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿ, ಅತಿಹೆಚ್ಚು ಪ್ರಕರಣಗಳಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಐದನೇ ಸ್ಥಾನಕ್ಕೆ ಬರುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.