ADVERTISEMENT

ಲಾಕ್‍ಡೌನ್‌ನಿಂದಾಗಿ ಆಹಾರ ಸಿಗುತ್ತಿಲ್ಲ; ಇಂದೋರ್‌ನಲ್ಲಿ ನಾಯಿ ಕಡಿತ ಹೆಚ್ಚಳ 

ಪಿಟಿಐ
Published 13 ಏಪ್ರಿಲ್ 2020, 12:28 IST
Last Updated 13 ಏಪ್ರಿಲ್ 2020, 12:28 IST
ಬೀದಿ ನಾಯಿ
ಬೀದಿ ನಾಯಿ   

ಇಂದೋರ್:ಅತೀ ಹೆಚ್ಚು ಕೊರೊನಾ ಸೋಂಕಿತರು ಇರುವ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಾಯಿಗಳ ಕಡಿತ ಪ್ರಕರಣ ಜಾಸ್ತಿಯಾಗಿದೆ. ಕಳೆದ 20 ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ ಎಂದು ಅಲ್ಲಿನವೈದ್ಯರೊಬ್ಬರು ಹೇಳಿದ್ದಾರೆ.

ಲಾಕ್‌ಡೌನ್ ಕಾರಣ ನಾಯಿಗಳಿಗೆ ಆಹಾರ ಸಿಗದಿರುವುದರಿಂದ ಅವುಗಳು ರೊಚ್ಚಿಗೆದ್ದು, ಮನುಷ್ಯರಿಗೆ ಕಚ್ಚುತ್ತಿವೆ ಎಂದು ಕಾರ್ಯಕರ್ತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಇಂದೋರ್‌ನಲ್ಲಿ ಕೊರಾನಾ ಸೋಂಕು ಇರುವ 22 ಹೊಸ ಪ್ರಕರಣಗಳು ವರದಿಯಾಗಿದ್ದು ರೋಗಿಗಳ ಸಂಖ್ಯೆ 328ಕ್ಕೇರಿದೆ. ಇಲ್ಲಿವರೆಗೆ ಕೋವಿಡ್ ರೋಗದಿಂದ ಸಾವಿಗೀಡಾದವರು 33 ಮಂದಿ.

ADVERTISEMENT

ಇದೀಗ ಬೀದಿ ನಾಯಿಯಿಂದ ಕಡಿತಕ್ಕೊಳಗಾಗಿ 40-50 ಮಂದಿ ಪ್ರತಿದಿನ ನಮ್ಮ ಆಸ್ಪತ್ರೆಗೆ ಬರುತ್ತಿದ್ದಾರೆ.ಲಾಕ್‌ಡೌನ್ ಇರುವಾಗಜನರು ಮನೆಯೊಳಗೆಯೇ ಇರಬೇಕು. ಹೀಗಿದ್ದರೂ ಜನರು ರಸ್ತೆಗಿಳಿಯುತ್ತಿದ್ದಾರೆ. ಕೊರೊನಾ ಸೋಂಕು ಜಾಸ್ತಿಯಾಗುತ್ತಿರುವ ಈ ಹೊತ್ತಲ್ಲಿ ಆಸ್ಪತ್ರೆಯ ಕೆಲವು ಸಿಬ್ಬಂದಿಗಳನ್ನು ನಾಯಿ ಕಡಿತ ರೋಗಿಗಳ ಚಿಕಿತ್ಸೆಗಾಗಿ ನಿಯೋಜನೆ ಮಾಡಬೇಕಾಗಿದೆ ಎಂದು ಲಾಲ್ ಹಾಸ್ಪಿಟಲ್ ಎಂದೇ ಖ್ಯಾತವಾಗಿರುವ ಹುಕುಂಚಂದ್ ಪಾಲಿ ಕ್ಲಿನಿಕ್‌ನ ಮೇಲ್ವಿಚಾರಕ ಅಶುತೋಷ್ ಶರ್ಮಾ ಹೇಳಿದ್ದಾರೆ.

ರೇಬಿಸ್ ತಡೆಯುವುದಕ್ಕಾಗಿ ನಾವು ರೋಗಿಗಳಿಗೆ 28 ದಿನಗಳ ಕಾಲ 4-5 ಚುಚ್ಚುಮದ್ದು ನೀಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಲಾಕ್‍ಡೌನ್‌ನಿಂದಾಗಿಸುಮಾರು 50,000 ನಾಯಿಗಳು ಆಹಾರಕ್ಕಾಗಿ ಅಲೆದಾಡುತ್ತಿವೆ ಎಂದು ಪೀಪಲ್ ಫಾರ್ ಅನಿಮಲ್ಸ್ ಇಂದೋರ್ ಘಟಕದ ಅಧ್ಯಕ್ಷ ಪ್ರಿಯಾಂಶು ಜೈನ್ ಹೇಳಿದ್ದಾರೆ.

ಅವುಗಳಿಗೆ ಆಹಾರ ಸಿಗದ ಕಾರಣ ರೊಚ್ಚಿಗೇಳುತ್ತಿವೆ. ನಾಯಿಗಳು ಹಸಿದಿರುವಾಗ ಜನರು ಮಾಸ್ಕ್ ಧರಿಸಿಕೊಂಡು ಹೋಗುತ್ತಿರುವುದನ್ನು ನೋಡಿದರೆ ಅವುಗಳು ಬೊಗಳಿ ಕಚ್ಚುತ್ತವೆ.ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ 10,000 ಚಪಾತಿ, ಗಂಜಿ ಮತ್ತು ಅನ್ನ ಮಾಡಿ ಬೀದಿ ನಾಯಿಗಳಿಗೆ ನೀಡುತ್ತಿರುವ ಪ್ರದೇಶಗಳಲ್ಲಿ ನಾಯಿ ಕಡಿತ ಪ್ರಕರಣಗಳು ಕಡಿಮೆ ಇವೆ ಅಂತಾರೆ ಜೈನ್.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.