ADVERTISEMENT

ಭಾರತಕ್ಕೆ ಬಂದಿರುವ 15 ಇಟಲಿ ಪ್ರವಾಸಿಗರಲ್ಲಿ ಕೊರೊನಾ ಸೋಂಕು ಪತ್ತೆ

ರಾಯಿಟರ್ಸ್
Published 4 ಮಾರ್ಚ್ 2020, 6:30 IST
Last Updated 4 ಮಾರ್ಚ್ 2020, 6:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತಕ್ಕೆ ಬಂದಿರುವ 15 ಮಂದಿ ಇಟಲಿ ಪ್ರವಾಸಿಗರಲ್ಲಿ ಕೊರೊನಾ ವೈರಸ್ ಸೋಂಕು (ಕೋವಿಡ್‌19) ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಜೈಪುರದಲ್ಲಿ ಇಟಲಿ ಪ್ರವಾಸಿಯೊಬ್ಬರಲ್ಲಿ ಮಂಗಳವಾರ ಸೋಂಕು ಪತ್ತೆಯಾಗಿತ್ತು. ‘ರೋಗಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತ್ತು. ರೋಗಿಯ ಜತೆಗೆ ಇದ್ದ ಇಟಲಿಯ 21 ಪ್ರವಾಸಿಗರು ಮತ್ತು ಮೂವರು ಭಾರತೀಯರನ್ನು (ಬಸ್‌ ಚಾಲಕ, ನಿರ್ವಾಹಕ, ಗೈಡ್‌) ಪ್ರತ್ಯೇಕಿಸಲಾದ ನಿಗಾ ಕೇಂದ್ರದಲ್ಲಿ ಇರಿಸಲಾಗಿತ್ತು. ಇವರಿಗೆ ಸೋಂಕು ತಗುಲಿದೆಯೇ ಎಂದು ಪರೀಕ್ಷೆ ನಡೆಸಲಾಗಿತ್ತು.

ಈ ಮಧ್ಯೆ, ಇಟಲಿಯಲ್ಲಿ ಕೊರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ 1,700 ದಾಟಿರುವುದಾಗಿ ವರದಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.