ADVERTISEMENT

ಭಾರತದಲ್ಲಿ 2 ಕೋಟಿ ಗಡಿದಾಟಿದ ಕೊರೊನಾವೈರಸ್ ಪತ್ತೆ ಪರೀಕ್ಷೆ: ಐಸಿಎಂಆರ್

ಪಿಟಿಐ
Published 3 ಆಗಸ್ಟ್ 2020, 11:16 IST
Last Updated 3 ಆಗಸ್ಟ್ 2020, 11:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್-19 ರೋಗ ಪತ್ತೆಗಾಗಿ ನಡೆಸುವ ಪರೀಕ್ಷೆಗಳ ಸಂಖ್ಯೆ 2 ಕೋಟಿ ಗಡಿದಾಟಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಂಕಿ ಅಂಶಗಳು ಹೇಳಿವೆ.

ಆಗಸ್ಟ್ 2ನೇ ತಾರೀಖಿನವರೆಗೆ 2,02,02,858 ಮಾದರಿಗಳನ್ನು ಪರೀಕ್ಷೆ ಮಾಡಿದ್ದು ಭಾನುವಾರ 3,81,027 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು ಎಂದು ಐಸಿಎಂಆರ್ ಹೇಳಿದೆ.ಕೋವಿಡ್-19 ಪತ್ತೆ ಪರೀಕ್ಷೆ ಜುಲೈ 6ರಂದು 1 ಕೋಟಿ ಗಡಿ ದಾಟಿತ್ತು.

ದೇಶದಲ್ಲೀಗ 1, 348 ಪರೀಕ್ಷಾ ಲ್ಯಾಬ್‌ಗಳಿದ್ದು ಈ ಪೈಕಿ 914 ಸಾರ್ವಜನಿಕ ವಲಯದಲ್ಲಿ ಮತ್ತು 434 ಖಾಸಗಿ ಲ್ಯಾಬ್‌ಗಳಿವೆ.

ADVERTISEMENT

ಮೊದಲು ಪುಣೆಯಲ್ಲಿನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ)ಯಲ್ಲಿ ಒಂದೇ ಒಂದು ಲ್ಯಾಬ್ ಇತ್ತು. ಲಾಕ್‌ಡೌನ್ ಆರಂಭವಾಗುತ್ತಿದ್ದಂತೆ 100 ಲ್ಯಾಬ್ ಸಿದ್ದಗೊಂಡಿತ್ತು. ಜೂನ್ 23ರಂದು ಲ್ಯಾಬ್‌ಗಳ ಸಂಖ್ಯೆ 1000 ಆಗಿತ್ತು.

ದೇಶದಲ್ಲಿ ಸೋಮವಾರ ಕೋವಿಡ್ ಸೋಂಕಿತರ ಸಂಖ್ಯೆ 18 ಲಕ್ಷ ದಾಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಒಂದೇ ದಿನ 52,972 ಪ್ರಕರಣಗಳು ವರದಿ ಆಗಿದ್ದು ಗುಣಮುಖರಾದವರ ಸಂಖ್ಯೆ11.85 ಲಕ್ಷ ಆಗಿದೆ.

ಸೋಂಕಿತರ ಸಂಖ್ಯೆ 18,03, 695 ಕ್ಕೇರಿದ್ದು ಇಲ್ಲಿಯವರೆಗೆ ಸಾವಿಗೀಡಾದವರ ಸಂಖ್ಯೆ 38,135 ಆಗಿದೆ. ಸೋಮವಾರ ಬೆಳಗ್ಗೆ 8ಗಂಟೆವರೆಗಿನ ಅಂಕಿ ಅಂಶದ ಪ್ರಕಾರ ಕಳೆದ 24ಗಂಟೆಗಳಲ್ಲಿ 771 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.