ADVERTISEMENT

ಮಹಿಳೆ ಕೇಳಿದ್ದಕ್ಕಿಂತ ಹೆಚ್ಚಿನ ಜೀವನಾಂಶಕ್ಕೆ ಕೋರ್ಟ್ ಆದೇಶಿಸಬಹುದು: ಒರಿಸ್ಸಾ HC

ಏಜೆನ್ಸೀಸ್
Published 6 ಮಾರ್ಚ್ 2025, 10:54 IST
Last Updated 6 ಮಾರ್ಚ್ 2025, 10:54 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಭುವನೇಶ್ವರ: ಪ್ರಕರಣದಲ್ಲಿನ ವಾಸ್ತಾವಾಂಶಗಳನ್ನು ಪರಿಗಣಿಸಿದ ನಂತರ, ಮಹಿಳೆಯು ಕೋರಿದ್ದ ಮೊತ್ತಕ್ಕಿಂತಲೂ ಹೆಚ್ಚಿನ ಜೀವನಾಂಶವನ್ನು ನೀಡುವಂತೆ ನ್ಯಾಯಾಲಯವು ಆದೇಶಿಸಬಹುದು ಎಂದು ಒರಿಸ್ಸಾ ಹೈಕೋರ್ಟ್‌ ಗುರುವಾರ ತೀರ್ಪು ನೀಡಿದೆ.

ಹಿಂದೂ ವಿವಾಹ ಕಾಯ್ದೆ–1955ರ ಅಡಿಯಲ್ಲಿ ಜೀವನಾಂಶದ ಮೊತ್ತವು ಮಹಿಳೆಯು ಅರ್ಜಿಯಲ್ಲಿ ಕೋರಿದ್ದಕ್ಕಿಂತಲೂ ಹೆಚ್ಚಾಗಬಹುದು ಎಂದು ನ್ಯಾಯಾಲಯ ಉಲ್ಲೇಖಿಸಿರುವುದಾಗಿ 'Live Law' ವರದಿ ಮಾಡಿದೆ.

ADVERTISEMENT

ವಿಭಾಗೀಯ ಪೀಠವು ಪ್ರಕರಣವೊಂದರ ವಿಚಾರಣೆ ವೇಳೆ, 'ಕಡಿಮೆ ಜೀವನಾಂಶಕ್ಕೆ ಬೇಡಿಕೆ ಇಡಲಾಗಿದ್ದರೂ, ಅವಲಂಬಿತರ ನಿಜವಾದ ಅಗತ್ಯತೆಗಳು ಹಾಗೂ ಪಾವತಿದಾರರ ಆರ್ಥಿಕ ಪರಿಸ್ಥಿತಿಗಳನ್ನು ಪರಿಗಣಿಸಿ, ನ್ಯಾಯಯುತ ಮೊತ್ತವನ್ನು ಒದಗಿಸಲು ನ್ಯಾಯಾಂಗವು ವಿವೇಚನೆಯನ್ನು ಬಳಸಬೇಕು' ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.