ADVERTISEMENT

ಸುಲಿಗೆ ಪ್ರಕರಣ: 15ರವರೆಗೆ ಸಚಿನ್‌ ವಾಜೆ ಪೊಲೀಸರ ವಶಕ್ಕೆ

ಪಿಟಿಐ
Published 13 ನವೆಂಬರ್ 2021, 10:08 IST
Last Updated 13 ನವೆಂಬರ್ 2021, 10:08 IST
ಸಚಿನ್ ವಾಜೆ
ಸಚಿನ್ ವಾಜೆ   

ಮುಂಬೈ: ಸುಲಿಗೆ ಆರೋಪದಡಿ ಬಂಧನದಲ್ಲಿರುವ ಮಾಜಿ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಚಿನ್‌ ವಾಜೆ ಅವರ ಪೊಲೀಸ್‌ ಕಸ್ಟಡಿ ಅವಧಿಯನ್ನು ಸ್ಥಳೀಯ ನ್ಯಾಯಾಲಯ ನ.15ರವರೆಗೆ ವಿಸ್ತರಿಸಿದೆ.

ಉದ್ಯಮಿ ಬಿಮಲ್‌ ಅಗರವಾಲ್‌ ಅವರ ದೂರು ಆಧರಿಸಿ ಗೋರೆಗಾವ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್‌ ಕಮಿಷನರ್ ಪರಂ ಬೀರ್‌ ಸಿಂಗ್ ಅವರೂ ಆರೋಪಿಯಾಗಿದ್ದಾರೆ.

ವಾಜೆ ಅವರನ್ನು ಶನಿವಾರಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ಒಪ್ಪಿಸಬೇಕು ಎಂದುಪೊಲೀಸರು ಮನವಿ ಮಾಡಿದರು. ನ್ಯಾಯಾಲಯ 15ರವರೆಗೆ ಕಸ್ಟಡಿ ಅವಧಿಯನ್ನು ವಿಸ್ತರಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.