ADVERTISEMENT

ಮೇ. ಗೊಗೊಯಿಗೆ ಶಿಕ್ಷೆ: ‘ಸೇವಾಹಿರಿತನ ಹಿಂಬಡ್ತಿ’ ಸಾಧ್ಯತೆ

ಪಿಟಿಐ
Published 1 ಏಪ್ರಿಲ್ 2019, 0:07 IST
Last Updated 1 ಏಪ್ರಿಲ್ 2019, 0:07 IST
ಮೇಜರ್ ಗೊಗೊಯಿ
ಮೇಜರ್ ಗೊಗೊಯಿ   

ನವದೆಹಲಿ/ಶ್ರೀನಗರ: ಮೇಜರ್ ಲೀತುಲ್ ಗೊಗೊಯಿ ಅವರ ವಿರುದ್ಧ ಸೇನಾ ನ್ಯಾಯಾಲಯ ನಡೆಸುತ್ತಿದ್ದ ವಿಚಾರಣಾ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶಿಕ್ಷೆಯ ಸಲುವಾಗಿ ‘ಸೇವಾ ಹಿರಿತನ’ದಲ್ಲಿ ಅವರಿಗೆ ಹಿಂಬಡ್ತಿ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ. ಗೊಗೊಯಿ ಜತೆಗೆ ಅವರ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಷ್ಟ್ರೀಯ ರೈಫಲ್ಸ್‌ನ 53ನೇ ಸೆಕ್ಟರ್‌ನ ಸಮೀರ್ ಮಲ್ಲಾ ವಿರುದ್ಧವೂ ವಿಚಾರಣೆ ಮುಕ್ತಾಯವಾಗಿದೆ. ಮಲ್ಲಾಗೆ ‘ತೀವ್ರ ವಾಗ್ದಂಡನೆ’ ವಿಧಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಈ ಫೆಬ್ರುವರಿಯಲ್ಲಿಗೊಗೊಯಿ ಹಾಗೂ ಮಲ್ಲಾ ವಿರುದ್ಧದ ಸಾಕ್ಷ್ಯಗಳ ಪರಿಶೀಲನೆ ಪೂರ್ಣಗೊಂಡ ಬಳಿಕ, ಇಬ್ಬರೂ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

ADVERTISEMENT

ಇವರಿಬ್ಬರೂ, ನಿಯಮಕ್ಕೆ ವಿರುದ್ಧವಾಗಿ ಸ್ಥಳೀಯ ಯುವತಿ ಜತೆ ಸ್ನೇಹ ಮಾಡಿದ ಹಾಗೂ ಕರ್ತವ್ಯದಲ್ಲಿದ್ದ ವೇಳೆಕಾರ್ಯಾಚರಣೆ ಸ್ಥಳದಿಂದ ದೂರ ಉಳಿದಿದ್ದ ಆರೋಪ ಎದುರಿಸುತ್ತಿದ್ದರು.

ಕಳೆದ ಮೇ 23ರಂದು ಕರ್ತವ್ಯದ ಅವಧಿಯಲ್ಲಿಯೇ ಮೇಜರ್ ಗೊಗೊಯಿ, 18 ವರ್ಷದ ಸ್ಥಳೀಯ ಯುವತಿ ಜತೆ ಹೋಟೆಲ್ ಪ್ರವೇಶಿಸಿ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದ್ದರು. ಈ ಸಂಬಂಧ‍ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.