ADVERTISEMENT

ಆರ್‌.ಜಿ ಕರ್ ಅತ್ಯಾಚಾರ ಪ್ರಕರಣ: ಇಂದು ಮಧ್ಯಾಹ್ನ ಶಿಕ್ಷೆಯ ಪ್ರಮಾಣ ಪ್ರಕಟ

ಪಿಟಿಐ
Published 20 ಜನವರಿ 2025, 6:29 IST
Last Updated 20 ಜನವರಿ 2025, 6:29 IST
<div class="paragraphs"><p>ಸಂಜಯ್‌ ರಾಯ್‌</p></div>

ಸಂಜಯ್‌ ರಾಯ್‌

   

ಕೋಲ್ಕತ್ತ: ಆರ್.ಜಿ ಕರ್ ವೈದ್ಯಕೀಯ ವಿದ್ಯಾರ್ಥಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದದಲ್ಲಿ ದೋಷಿಯಾಗಿರುವ ಸಂಜಯ್ ರಾಯ್‌ನ ಶಿಕ್ಷೆ ಪ್ರಮಾಣವನ್ನು ಇಂದು (ಸೋಮವಾರ) ಕೋಲ್ಕತ್ತದ ನ್ಯಾಯಾಲಯವೊಂದು ಪ್ರಕಟಿಸಲಿದೆ.

ಸದ್ಯ ರಾಯ್ ಮೇಲೆ ಹೊರಿಸಲಾಗಿರುವ ಪ್ರಕರಣಗಳು ಕನಿಷ್ಠ ಜೀವಾವಧಿ, ಗರಿಷ್ಠ ಮರದಂಡಣೆ ಶಿಕ್ಷೆಗೆ ಗುರಿಯಾಗುವಂಥವು.

ADVERTISEMENT

ಕಳೆದ ವರ್ಷ ಆಗಸ್ಟ್‌ 9ರಂದು ನಡೆದ ವೈದ್ಯ ವಿದ್ಯಾರ್ಥಿಯ ಅತ್ಯಾಚಾರ ಪ್ರಕರಣದಲ್ಲಿ ರಾಯ್‌ನನನ್ನು, ಸಿಯಾಲ್ಡಾದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಮೂರ್ತಿ ಅನಿರ್ಬನ್ ದಾಸ್ ಅವರು ಶನಿವಾರ ದೋಷಿ ಎಂದು ತೀರ್ಪು ನೀಡಿದ್ದರು.

ಘಟನೆ ಸಂಬಂಧ ರಾಯ್‌ನನ್ನು ಆಗಸ್ಟ್‌ 10ರಂದು ಪೊಲೀಸರು ಬಂಧಿಸಿದ್ದರು. ಆತನ ಮೇಲೆ ಭಾರತೀಯ ನ್ಯಾಯ ಸಂಹಿತೆಯ 64, 66 ಹಾಗೂ 103 (1) ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.