ADVERTISEMENT

ಕೊರೊನಾ ತಡೆಗೆ ಕ್ರಮ: ದೇಶೀಯ ವಿಮಾನ ಹಾರಾಟ ಇಂದು ಮಧ್ಯರಾತ್ರಿಯಿಂದ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 2:07 IST
Last Updated 24 ಮಾರ್ಚ್ 2020, 2:07 IST
   

ನವದೆಹಲಿ: ಕೊರೊನಾ ವೈರಸ್ ಸೋಂಕು (ಕೋವಿಡ್-19) ಹರಡುವುದನ್ನು ತಡೆಗಟ್ಟುವ ಸಲುವಾಗಿ ಎಲ್ಲ ದೇಶೀಯ ವಾಣಿಜ್ಯ ವಿಮಾನಗಳ ಹಾರಾಟವನ್ನು ಇಂದು ಮಧ್ಯರಾತ್ರಿಯಿಂದ ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ.

‘ಇಂದು (ಮಾರ್ಚ್ 24) ರಾತ್ರಿ 12 ಗಂಟೆಯಿಂದ ದೇಶೀಯ ವಿಮಾನ ಹಾರಾಟ ನಿಷೇಧಿಸಲಾಗುತ್ತಿದೆ. ಸದ್ಯ ಕಾರ್ಯಾಚರಣೆಯಲ್ಲಿರುವ ಎಲ್ಲ ವಿಮಾನಗಳೂ ರಾತ್ರಿ 11.59ರ ಒಳಗೆ ಲ್ಯಾಂಡ್ ಆಗುವಂತೆ ವಿಮಾನಯಾನ ಸಂಸ್ಥೆಗಳು ನೋಡಿಕೊಳ್ಳಬೇಕು’ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಆದಾಗ್ಯೂ, ಸರಕುಸಾಗಣೆ ವಿಮಾನಗಳ ಹಾರಾಟಕ್ಕೆ ನಿಷೇಧ ಅನ್ವಯವಾಗುವುದಿಲ್ಲ. ನಿಷೇಧಕ್ಕೆ ಸಮಯ ಮಿತಿಯನ್ನೂ ಸಚಿವಾಲಯ ನಿಗದಿಪಡಿಸಿಲ್ಲ.

ADVERTISEMENT

ಎಲ್ಲ ಅಂತರರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಸರ್ಕಾರ ಭಾನುವಾರದಿಂದಲೇ ನಿಷೇಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.