ADVERTISEMENT

ಕೋವಿಡ್–19 | ದೇಶದಲ್ಲಿ ಗುಣಮುಖರ ಪ್ರಮಾಣ ಏರಿಕೆ

ಪಿಟಿಐ
Published 30 ಏಪ್ರಿಲ್ 2020, 21:00 IST
Last Updated 30 ಏಪ್ರಿಲ್ 2020, 21:00 IST
   
""

ನವದೆಹಲಿ: ದೇಶದಲ್ಲಿ ಕೋವಿಡ್–19ಗೆ ತುತ್ತಾಗಿದ್ದವರಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಏರಿಕೆ ಆಗಿದೆ. ಶೇ 25ಕ್ಕೂ
ಹೆಚ್ಚು ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಇದೇ ವೇಳೆ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುವ ಅವಧಿಯೂ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

* ಕೋವಿಡ್‌ಗೆ ಒಳಗಾದವರಲ್ಲಿ ಶೇ 25.13ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ. ಎರಡು ವಾರದ ಹಿಂದೆ ಈ ಪ್ರಮಾಣ
ಶೇ 13ರಷ್ಟು ಇತ್ತು.

* ತಮಿಳುನಾಡಿನಲ್ಲಿ ಶೇ 56.75 ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಶೇ 39.58ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ.

ADVERTISEMENT

* ಸರಕುಗಳ ಅಂತರ ರಾಜ್ಯ ಸಾಗಾಟಕ್ಕೆ ಪಾಸ್‌ಗಳ ಅಗತ್ಯ ಇಲ್ಲ. ಲಾರಿಗಳಿಗೆ ಪಾಸ್‌ ಬೇಕಿಲ್ಲ, ಚಾಲಕರ ಚಾಲನಾ ಪರವಾನಗಿಯೇ ಸಾಕು ಎಂದು ಕೇಂದ್ರ ಸರ್ಕಾರ ಹೇಳಿದೆ* ವಿವಿಧೆಡೆ ಸಿಲುಕಿಕೊಂಡಿರುವ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರರನ್ನು ಊರಿಗೆ ಕಳುಹಿಸಲು ಬಸ್‌ಗಳನ್ನು ಮಾತ್ರ ಬಳಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.