ADVERTISEMENT

Covid-19 India Update: ಮಹಾರಾಷ್ಟ್ರದಲ್ಲಿ 72,383 ಸಕ್ರಿಯ ಪ್ರಕರಣಗಳು

ಏಜೆನ್ಸೀಸ್
Published 14 ಡಿಸೆಂಬರ್ 2020, 16:29 IST
Last Updated 14 ಡಿಸೆಂಬರ್ 2020, 16:29 IST
ಕೊರೊನಾವೈರಸ್
ಕೊರೊನಾವೈರಸ್   

ನವದೆಹಲಿ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌–19 ದೃಢಪಟ್ಟ 2,949 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 4,610 ಮಂದಿ ಗುಣಮುಖರಾಗಿದ್ದಾರೆ.

ಒಟ್ಟು 18,83,365 ಕೋವಿಡ್‌ ಪ್ರಕರಣಗಳ ಪೈಕಿ 17,61,615 ಮಂದಿ ಗುಣಮುಖರಾಗಿದ್ದರೆ, 48,269 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ 72,383 ಸಕ್ರಿಯ ಪ್ರಕರಣಗಳಿವೆ.

ಕೇರಳದಲ್ಲಿ 2,707 ಹೊಸ ಪ್ರಕರಣಗಳು ದಾಖಲಾಗಿದ್ದು, 57,640 ಸಕ್ರಿಯ ಪ್ರಕರಣಗಳಿವೆ. ದೆಹಲಿಯಲ್ಲಿ 1,376 ಹೊಸ ಪ್ರಕರಣಗಳು ವರದಿಯಾಗಿವೆ ಹಾಗೂ 2,854 ಮಂದಿ ಗುಣಮುಖರಾಗಿದ್ದಾರೆ. ಅಲ್ಲಿ 15,247 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಸೋಮವಾರ ರಾಜಸ್ಥಾನದಲ್ಲಿ ಕೋವಿಡ್‌–19 ದೃಢಪಟ್ಟ 1,250 ಪ್ರಕರಣಗಳು, ತಮಿಳುನಾಡಿನಲ್ಲಿ 1,141 ಪ್ರಕರಣಗಳು, ಹರಿಯಾಣದಲ್ಲಿ 993 ಪ್ರಕರಣಗಳು, ಆಂಧ್ರ ಪ್ರದೇಶದಲ್ಲಿ 305 ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ 27,071 ಹೊಸ ಕೋವಿಡ್ 19 ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಬಾಧಿತರ ಸಂಖ್ಯೆಯು 98,84,100ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.

ಕಳೆದ 24 ತಾಸಿನಲ್ಲಿ 336 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,43,355ಕ್ಕೆ ತಲುಪಿದೆ.

ಹಾಗೆಯೇ ಕೋವಿಡ್ 19 ಸಕ್ರಿಯ ಪ್ರಕರಣಗಳು 3,52,586ಕ್ಕೆ ತಲುಪಿದೆ. ಇನ್ನು 93,88,159 ಮಂದಿ ರೋಗ ಮುಕ್ತಿಯನ್ನು ಹೊಂದಿದ್ದಾರೆ. ಈ ಪೈಕಿ ಕಳೆದ 24 ಗಂಟೆಗಳಲ್ಲಿ 30,695 ಮಂದಿ ಕೋವಿಡ್ ಗೆದ್ದು ಬರುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 75,202 ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು ದಾಖಲಾಗಿದೆ. ಕೇರಳದಲ್ಲಿ 59,588 ಹಾಗೂ ನವದೆಹಲಿಯಲ್ಲಿ 16,785 ಸಕ್ರಿಯ ಪ್ರಕರಣಗಳಿವೆ.

ರಾಷ್ಟ್ರ ರಾಜಧಾನಿಯಲ್ಲಿ 5,80,655 ಮಂದಿ ಚೇತರಿಕೆಯನ್ನು ಹೊಂದಿದ್ದು, 10,014 ಮಂದಿ ಸಾವಿಗೆ ಶರಣಾಗಿದ್ದಾರೆ ಎಂದು ಆರೋಗ್ಯ ಇಲಾಖೆಯು ತಿಳಿಸಿದೆ.

ಏತನ್ಮಧ್ಯೆ ಡಿಸೆಂಬರ್ 13ರ ವರೆಗೆ 15,45,66,990 ಸ್ಯಾಂಪಲ್‌ಗಳನ್ನು ಟೆಸ್ಟ್ ಮಾಡಿಸಲಾಗಿದೆ. ಈ ಪೈಕಿ 8,55,157 ಸ್ಯಾಂಪಲ್‌ಗಳನ್ನು ಭಾನುವಾರ ಟೆಸ್ಟ್ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

ಕೋವಿಡ್ 19 ಪಟ್ಟಿ:
ಒಟ್ಟು ಪ್ರಕರಣಗಳು: 98,84,100
ಸಕ್ರಿಯ ಪ್ರಕರಣಗಳು: 3,52,586
ಮರಣ: 1,43,355
ರೋಗಮುಕ್ತಿ: 93,88,159

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.