ADVERTISEMENT

Covid-19 India Update | ಒಂದೇ ದಿನ 137 ಜನ ಸಾವು, 6654 ಹೊಸ ಪ್ರಕರಣ ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮೇ 2020, 4:53 IST
Last Updated 23 ಮೇ 2020, 4:53 IST
   

ನವದೆಹಲಿ: ದೇಶದಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 6,654 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 137 ಜನರು ಮೃತಪಟ್ಟಿದ್ದಾರೆ ಎಂದುಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದುವರೆಗೆ ಒಟ್ಟು 1,25,101 ಜನರಲ್ಲಿಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದರಲ್ಲಿ48,533 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.ಸಾವಿನ ಸಂಖ್ಯೆ 3,720ಕ್ಕೆ ಏರಿಕೆಯಾಗಿದ್ದು,69,597ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆಯು44,582ಕ್ಕೆ ಏರಿಕೆಯಾಗಿದ್ದು,ಈವರೆಗೆ 1,517 ಜನರು ಸಾವಿಗೀಡಾಗಿದ್ದಾರೆ. 12,583 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತಮಿಳುನಾಡಿನಲ್ಲಿ 14,753 ಪ್ರಕರಣಗಳು ಪತ್ತೆಯಾಗಿದ್ದು, 7,128 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 98 ಮಂದಿ ಸಾವಿಗೀಡಾಗಿದ್ದಾರೆ.

ADVERTISEMENT

ಗುಜರಾತ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 13,268ಕ್ಕೆ ಏರಿದ್ದು, ಈವರೆಗೆ 802 ಮಂದಿ ಸಾವಿಗೀಡಾಗಿದ್ದಾರೆ. 5,880 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ದೆಹಲಿಯಲ್ಲಿ ಈವರೆಗೆ ಒಟ್ಟು 12,319 ಕೋವಿಡ್‌-19 ಪ್ರಕರಣಗಳು ದಾಖಲಾಗಿದ್ದು, 208 ಮಂದಿ ಮೃತಪಟ್ಟಿದ್ದಾರೆ. 5,897ಮಂದಿ ಗುಣಮುಖರಾಗಿದ್ದಾರೆ.

ಕರ್ನಾಟದಲ್ಲಿ ಶುಕ್ರವಾರಸಂಜೆ 5ರ ವರೆಗೆ ಸೋಂಕಿತರ ಸಂಖ್ಯೆ1,743ಕ್ಕೆ ಏರಿಕೆಯಾಗಿದೆ. ಇದರಲ್ಲಿ 41 ಜನರು ಮೃತಪಟ್ಟಿದ್ದರೆ, 597 ಮಂದಿ ಗುಣಮುಖರಾಗಿದ್ದಾರೆ. 1,104 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.