ADVERTISEMENT

Covid-19 India Update: ಬೂತ್ ಮಟ್ಟದ ಚುನಾವಣೆ ಮಾದರಿಯಲ್ಲೇ ಲಸಿಕೆ ಹಂಚಿಕೆ

ಏಜೆನ್ಸೀಸ್
Published 3 ಜನವರಿ 2021, 5:03 IST
Last Updated 3 ಜನವರಿ 2021, 5:03 IST
ಕೋವಿಡ್-19 ಲಸಿಕೆ ಹಂಚಿಕೆ ತಾಲೀಮು ಪರಿಶೀಲಿಸುತ್ತಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್
ಕೋವಿಡ್-19 ಲಸಿಕೆ ಹಂಚಿಕೆ ತಾಲೀಮು ಪರಿಶೀಲಿಸುತ್ತಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್   

ನವದೆಹಲಿ: ಕೋವಿಡ್-19 ಲಸಿಕೆ ವಿತರಣೆಯು ಬೂತ್ ಮಟ್ಟಕ್ಕೆ ಯೋಜಿಸಿರುವ ಚುನಾವಣಾ ಪ್ರಕ್ರಿಯೆಯನ್ನು ಆಧರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

719 ಜಿಲ್ಲೆಗಳಿಂದ 57,000ಕ್ಕೂ ಹೆಚ್ಚು ಮಂದಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಇದುವರೆಗೆ 96,000 ಮಂದಿಗೆ ಲಸಿಕೆ ವಿತರಣೆ ತರಬೇತಿಯನ್ನು ನೀಡಲಾಗಿದೆ ಎಂದವರು ತಿಳಿಸಿದರು.

ಏತನ್ಮಧ್ಯೆ ಕಳೆದ 24 ತಾಸಿನೊಳಗೆ ದೇಶದಲ್ಲಿ ಹೊಸತಾಗಿ 18,177 ಕೋವಿಡ್-19 ಪ್ರಕರಣಗಳು ದಾಖಲಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1,03,23,965ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾನುವಾರ ಮಾಹಿತಿ ಒದಗಿಸಿದೆ.

ADVERTISEMENT

ಕಳೆದ 24 ತಾಸಿನಲ್ಲಿ 217 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟಾರೆ ಸಾವಿನ ಸಂಖ್ಯೆ 1,49,435ಕ್ಕೆ ಏರಿಕೆಯಾಗಿದೆ.

ಹಾಗೆಯೇ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,47,220ಕ್ಕೆ ತಲುಪಿದೆ. ಇನ್ನು 99,27,310 ಮಂದಿ ಚೇತರಿಸಿಕೊಂಡಿದ್ದಾರೆ.

ಕೊರೊನಾ ವೈರಸ್ ಅಂಕಿಅಂಶ ಇಂತಿದೆ:
ಒಟ್ಟು ಪ್ರಕರಣ: 1,03,23,965
ಸಕ್ರಿಯ ಪ್ರಕರಣ: 2,47,220
ಗುಣಮುಖ: 99,27,310
ಮರಣ: 1,49,435

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.