ADVERTISEMENT

ಲಾಕ್‍ಡೌನ್: ಜಮ್ಮು ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚಳ

ಜುಲ್ಫಿಕರ್ ಮಜಿದ್
Published 19 ಏಪ್ರಿಲ್ 2020, 5:40 IST
Last Updated 19 ಏಪ್ರಿಲ್ 2020, 5:40 IST
ಪ್ರಾತಿನಿಧಿಕ ಚಿತ್ರ  (ಪಿಟಿಐ)
ಪ್ರಾತಿನಿಧಿಕ ಚಿತ್ರ (ಪಿಟಿಐ)   

ಶ್ರೀನಗರ: ಲಾಕ್‍ಡೌನ್ ವೇಳೆ ಮನೆಯೊಳಗೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಇತರ ಕೋರ್ಟ್‌ಗಳಿಗೆ ಆದೇಶಿಸಿದೆ.

ಕೋವಿಡ್ -19 ಜಾಗತಿಕ ಪಿಡುಗುನಿಂದಾಗಿ ಲಾಕ್‍ಡೌನ್ ಘೋಷಿಸಿದ್ದು ಇದುಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ಇದು ಋಣಾತ್ಮಕ ಪರಿಣಾಮ ಬೀರಿದೆ ಎಂದು ಹೈಕೋರ್ಟ್ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ರಜನೀಶ್ ಓಸ್ವಾಲ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಶನಿವಾರ ಪ್ರಕರಣಗಳನ್ನು ಆಲಿಸಿದ್ದಾರೆ.

ಜಾಗತಿಕ ಪಿಡುಗು ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ಸಾಮಾಜಿಕ ಮತ್ತು ಆರ್ಥಿಕಾಗಿ ಪರಿಣಾಮ ಬೀರಿದೆ. ಅದೇ ವೇಳೆ ಲಾಕ್‍ಡೌನ್ ಹೊತ್ತಲ್ಲಿ ಮನೆಯೊಳಗೆ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಮತ್ತು ಇತರ ದೌರ್ಜನ್ಯದ ವಿರುದ್ಧಯಾವ ರೀತಿಯ ಕ್ರಮಕೈಗೊಂಡಿದ್ದೀರಿ ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.

ADVERTISEMENT

ಈ ವಿಷಯದಲ್ಲಿ ಬೇರೆ ಬೇರೆ ದೇಶಗಳು ಯಾವ ರೀತಿಯ ಪರಿಹಾರ ಕಂಡುಕೊಂಡಿವೆ ಎಂಬುದರ ಬಗ್ಗೆಯೂ ಗಮನ ಹರಿಸಿ ಎಂದು ಕೋರ್ಟ್ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದೆ. ಮುಂದಿನ ಕೋರ್ಟ್ ಸೆಷನ್ ವೇಳೆ ಯಾವ ರೀತಿಯ ಪರಿಹಾರ ಮಾರ್ಗ ಮತ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಲು ನ್ಯಾಯಾಲಯಸೂಚಿಸಿದೆ .

ಮಹಿಳೆಯರ ಮೇಲೆ ದೌರ್ಜನ್ಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ಬಾಕಿ ಉಳಿದಿರುವ ದೂರುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಲೀಗಲ್ ಸರ್ವೀಸ್ ಅಥಾರಿಟಿಯ ಕಾರ್ಯದರ್ಶಿಯವರಿಗೆ ಹೈಕೋರ್ಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.