ADVERTISEMENT

ಮುಂಬೈ: ಒಂದೇ ದಿನ ಎಂಟು ಸಾವಿರ ದಾಟಿದ ಕೋವಿಡ್ ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2022, 14:34 IST
Last Updated 2 ಜನವರಿ 2022, 14:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳಗೊಂಡಿದೆ. ಭಾನುವಾರ (ಜ.2) ಒಂದೇ ದಿನ 8,036 ಪ್ರಕರಣ ವರದಿಯಾಗಿವೆ.

ಈ ಮೂಲಕ ಕಳೆದ ದಿನಕ್ಕೆ ಹೋಲಿಸಿದಾಗ ಶೇಕಡ 27ರಷ್ಟು ಹೆಚ್ಚಳ ಕಂಡುಬಂದಿದೆ. ಶನಿವಾರದಂದು 6,347 ಪ್ರಕರಣಗಳು ವರದಿಯಾಗಿದ್ದವು.

ಮುಂಬೈನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 29,819ಕ್ಕೆ ತಲುಪಿದೆ. ಭಾನುವಾರದಂದು 503 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

578 ಮಂದಿ ಚೇತರಿಸಿಕೊಂಡಿದ್ದು, ಇದುವರೆಗೆ ಒಟ್ಟು 7.5 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ಮುಂಬೈನಲ್ಲಿ ಭಾನುವಾರದಂದು ಕೋವಿಡ್‌ನಿಂದ ಯಾವುದೇ ಸಾವು ವರದಿಯಾಗಿಲ್ಲ.

ಓಮೈಕ್ರಾನ್ ಒಳಗೊಂಡಂತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ಮುಂಬೈನಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಲಾಗಿದೆ. ಮುಂಬೈನಲ್ಲಿ ಜನವರಿ 15ರವರೆಗೆ ಸೆಕ್ಷನ್ 144 (ಸಿಆರ್‌ಪಿಸಿ) ಹೇರಲಾಗಿದೆ.

ಮಹಾರಾಷ್ಟ್ರ:11,877 ಕೋವಿಡ್ ಪ್ರಕರಣ
ಮಹಾರಾಷ್ಟ್ರದಲ್ಲಿ ಭಾನುವಾರ 11,877 ಕೋವಿಡ್ ಪ್ರಕರಣಗಳು ವರದಿಯಾಗಿವೆ. 2,069 ಮಂದಿ ಗುಣಮುಖರಾಗಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಸದ್ಯ 42,024 ಸಕ್ರಿಯ ಪ್ರಕರಣಗಳಿವೆ.

ಮುಂಬೈನಲ್ಲಿ ಒಂದು ಪ್ರಕರಣ ಒಳಗೊಂಡಂತೆ ಮಹಾರಾಷ್ಟ್ರದಲ್ಲಿ ಒಟ್ಟು 50 ಓಮೈಕ್ರಾನ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 510ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.