ADVERTISEMENT

ರಾಜಸ್ಥಾನ: ವಿದೇಶದಿಂದ ಬಂದ ಐವರಿಗೆ ಓಮೈಕ್ರಾನ್, ಸಂಪರ್ಕಿತರಿಗೂ ತಗುಲಿದ ಸೋಂಕು

ಪಿಟಿಐ
Published 25 ಡಿಸೆಂಬರ್ 2021, 13:04 IST
Last Updated 25 ಡಿಸೆಂಬರ್ 2021, 13:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೈಪುರ: ರಾಜಸ್ಥಾನದಲ್ಲಿ ವಿದೇಶದಿಂದ ಬಂದ ಐವರು ಸೇರಿದಂತೆ ಹೊಸದಾಗಿ 21 ಓಮೈಕ್ರಾನ್‌ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕಿತರ ಪೈಕಿ 11 ಮಂದಿ ಜೈಪುರ, ಆರು ಮಂದಿ ಅಜ್ಮೇರ್ ಮತ್ತು ಮೂವರು ಉದಯಪುರದವರಾಗಿದ್ದಾರೆ. ಮತ್ತೊಬ್ಬರು ಮಹಾರಾಷ್ಟ್ರದವರು. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ನೀಡಿರುವ ವರದಿಯಲ್ಲಿ ಓಮೈಕ್ರಾನ್ ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಶನಿವಾರ ತಿಳಿಸಿದೆ.

ಇವರಲ್ಲಿ ಐವರು ವಿದೇಶದಿಂದ ಹಿಂತಿರುಗಿದ್ದರು. ವಿದೇಶದಿಂದ ಬಂದವರ ಸಂಪರ್ಕಕ್ಕೆ ಬಂದಿದ್ದ ಮೂವರಲ್ಲೂ ಓಮೈಕ್ರಾನ್ ಪತ್ತೆಯಾಗಿದೆ.

ADVERTISEMENT

ಒಟ್ಟು 43 ಪ್ರಕರಣಗಳ ಪೈಕಿ, 28 ಮಂದಿ ಜೈಪುರ, 7 ಮಂದಿ ಅಜ್ಮೇರ್, ನಾಲ್ವರು ಸಿಕಾರ್, ಮೂವರು ಉದಯಪುರ ಮತ್ತು ಮಹಾರಾಷ್ಟ್ರದ ಒಬ್ಬರು ಇದ್ದಾರೆ. ಸದ್ಯ ರಾಜಸ್ತಾನದಲ್ಲಿ 244 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.