ADVERTISEMENT

ದೇಶದಲ್ಲಿ 6 ಮಂದಿಗೆ ರೂಪಾಂತರಿ ಕೊರೊನಾ ವೈರಸ್‌ ಸೋಂಕು: ಬೆಂಗಳೂರಲ್ಲೇ 3 ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2020, 5:04 IST
Last Updated 29 ಡಿಸೆಂಬರ್ 2020, 5:04 IST
ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆ
ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆ    

ಬೆಂಗಳೂರು: ಬ್ರಿಟನ್‌ನಿಂದ ಭಾರತಕ್ಕೆ ಹಿಂದಿರುಗಿದ ಆರು ಮಂದಿಗೆ ರೂಪಾಂತರಿ ಕೊರೊನಾ ವೈರಸ್ ಸೋಂಕು‌ ಇರುವುದು ದೃಢವಾಗಿದೆ. ಭಾರತದಲ್ಲಿ ಹೊಸ ಮಾದರಿಯ ಕೊರೊನಾ ವೈರಸ್‌ ಪತ್ತೆಯಾಗಿರುವುದು ಇದೇ ಮೊದಲು.

ಆರು ಸೋಂಕಿತರ ಪೈಕಿ ಬೆಂಗಳೂರಿನಲ್ಲೇ ಮೂವರಿದ್ದಾರೆ. ಎರಡು ಪ್ರಕರಣಗಳು ಹೈದರಾಬಾದ್‌ನಲ್ಲಿ, ಒಂದು ಪ್ರಕರಣ ಪುಣೆಯಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಈ ವೈರಸ್‌ ಈಗಿನ ಕೊರೊನಾ ವೈರಸ್‌ಗಿಂತಲೂ ಶೇಕಡಾ 70ರಷ್ಟು ಹೆಚ್ಚು ಸಾಂಕ್ರಾಮಿಕಗೊಳ್ಳುವ ಶಕ್ತಿ ಹೊಂದಿದೆ ಎಂದು ಹೇಳಲಾಗಿದೆ. ಸದ್ಯ ಇದು ಬ್ರಿಟನ್‌ನಲ್ಲಿ ವ್ಯಾಪಕಗೊಂಡಿದ್ದು, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂದು ಬ್ರಿಟನ್‌ ಸರ್ಕಾರ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.