ADVERTISEMENT

ವಿಶ್ವದಲ್ಲಿ ಸ್ವಾವಲಂಬಿ ನವ ಭಾರತದ ಉದಯ: ಅಮಿತ್ ಶಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2021, 11:31 IST
Last Updated 16 ಜನವರಿ 2021, 11:31 IST
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ   

ನವದೆಹಲಿ: ವಿಶ್ವದ ಅತಿ ದೊಡ್ಡ ಕೋವಿಡ್-19 ಲಸಿಕೆ ವಿತರಣೆಯು ಜಗತ್ತಿನಲ್ಲಿ ಸ್ವಾವಲಂಬಿ ನವ ಭಾರತದ ಉದಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತಿಳಿಸಿದ್ದಾರೆ.

ಶನಿವಾರ ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತ್ ಶಾ, ಕೋವಿಡ್-19 ಲಸಿಕೆ ಹಂಚಿಕೆಯು ಐತಿಹಾಸಿಕ ಕ್ಷಣ ಹಾಗೂ ಮಹತ್ವದ ಮೈಲುಗಲ್ಲು ಎಂದುಉಲ್ಲೇಖಿಸಿದರು.

'ದೇಶವು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೋವಿಡ್-19 ಪಿಡುಗಿನ ವಿರುದ್ಧದ ಹೋರಾಟದಲ್ಲಿ ಭಾರತ ಪ್ರಮುಖ ಹಂತವನ್ನು ದಾಟಿದೆ. ವಿಶ್ವದ ಅತಿ ದೊಡ್ಡ ಲಸಿಕೆ ವಿತರಣೆ ಅಭಿಯಾನವು ವಿಜ್ಞಾನಿಗಳ ಅಪಾರ ಸಾಮರ್ಥ್ಯ ಮತ್ತು ನಾಯಕತ್ವದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ' ಎಂದು ಹೇಳಿದರು.

ADVERTISEMENT

'ಮಾನವಕುಲದ ವಿರುದ್ಧಎದುರಾಗಿರುವ ಬಿಕ್ಕಟ್ಟನ್ನು ಸಮಾಪ್ತಿಗೊಳಿಸುವಲ್ಲಿ ಯಶಸ್ವಿಯಾಗಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ. ಈ ಅಭೂತಪೂರ್ವ ಸಾಧೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಿದೆ. ಇದು ಜಗತ್ತಿನಲ್ಲಿ ಸ್ವಾವಲಂಬಿ ನವ ಭಾರತದ ಉದಯವಾಗಿದೆ. ಎಲ್ಲ ವಿಜ್ಞಾನಿಗಳಿಗೂ ಅಭಿನಂದನೆಗಳು' ಎಂದು ತಿಳಿಸಿದರು.

'ನರೇಂದ್ರ ಮೋದಿ ನೇತೃತ್ವದ ಈ ನವ ಭಾರತವು ವಿಪತ್ತುಗಳನ್ನು ಅವಕಾಶಗಳಾಗಿ ಮತ್ತು ಸವಾಲುಗಳನ್ನು ಸಾಧನೆಗಳಾಗಿ ಪರಿವರ್ತಿಸುವ ಭಾರತವಾಗಿದೆ. ಈ 'ಮೇಡ್ ಇನ್ ಇಂಡಿಯಾ' ಲಸಿಕೆಯು ಸ್ವಾವಲಂಬಿ ಭಾರತದ ಪ್ರತೀಕವಾಗಿದೆ. ಈ ಐತಿಹಾಸಿಕ ದಿನದಂದು ನಮ್ಮ ಎಲ್ಲ ಕೊರೊನಾ ಸೇನಾನಿಗಳಿಗೆ ಕೋಟಿ ಕೋಟಿ ನಮನಗಳು' ಎಂದು ಉಲ್ಲೇಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.