ನವದೆಹಲಿ: 24 ಗಂಟೆಗಳಲ್ಲಿ ಒಟ್ಟು 3,688 ಹೊಸ ಕೋವಿಡ್ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಇದೇ ಅವಧಿಯಲ್ಲಿ 50 ಸಾವುಗಳು ಸಂಭವಿಸಿದೆ.
ಹಿಂದಿನ ದಿನ 3,377 ಹೊಸ ಪ್ರಕರಣಗಳು ವರದಿಯಾಗಿದ್ದವು. ಇದರೊಂದಿಗೆ ಭಾರತದಲ್ಲಿ ಕೋವಿಡ್ ಏರುಗತಿಯ ಟ್ರೆಂಡ್ ಇಂದೂ ಕೂಡ ಮುಂದುವರಿದಿದೆ.
ಒಂದು ದಿನದ ಈ ಅವಧಿಯಲ್ಲಿ 2,496 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ಭಾರತದಲ್ಲಿ ಒಟ್ಟು 18,684 ಸಕ್ರಿಯ ಪ್ರಕರಣಗಳಿವೆ.
ಭಾರತದ ದೈನಂದಿನ ಪಾಸಿಟಿವಿಟಿ ದರ ಪ್ರಸ್ತುತ ಶೇ 0.74ಕ್ಕೆ ತಲುಪಿದೆ. ಶುಕ್ರವಾರ ಶೇ 0.71 ಇತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.