ADVERTISEMENT

‘ಹೆಚ್ಚು ಅಪಾಯ’ದ ದೇಶಗಳಿಂದ ಬಂದವರ ಪೈಕಿ 6 ಜನರಲ್ಲಿ ಕೋವಿಡ್‌ ದೃಢ

ಪಿಟಿಐ
Published 1 ಡಿಸೆಂಬರ್ 2021, 19:44 IST
Last Updated 1 ಡಿಸೆಂಬರ್ 2021, 19:44 IST
ಕೊರೊನಾ ವೈರಸ್
ಕೊರೊನಾ ವೈರಸ್   

ನವದೆಹಲಿ: ಕೊರೊನಾ ವೈರಸ್‌ನ ಓಮೈಕ್ರಾನ್ ತಳಿ ಸೋಂಕು ಪ್ರಸರಣದ ಆತಂಕ ಹೆಚ್ಚುತ್ತಿರುವ ನಡುವೆಯೇ, ‘ಹೆಚ್ಚು ಅಪಾಯ’ದ ದೇಶಗಳಿಂದ ಬಂದ 11 ವಿಮಾನಗಳಲ್ಲಿದ್ದ ಪ್ರಯಾಣಿಕರ ಪೈಕಿ 6 ಜನರಲ್ಲಿ ಕೋವಿಡ್‌–19 ಬುಧವಾರ ದೃಢಪಟ್ಟಿದೆ.

ಈ ವಿಮಾನಗಳ ಮೂಲಕ ಒಟ್ಟು 3,476 ಪ್ರಯಾಣಿಕರು ವಿವಿಧ ವಿಮಾನನಿಲ್ದಾಣಗಳಲ್ಲಿ ಇಳಿದಿದ್ದಾರೆ. ಎಲ್ಲರನ್ನು ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗಿದೆ.ಕೋವಿಡ್‌ ದೃಢಪಟ್ಟಿರುವ ಪ್ರಯಾಣಿಕರ ಗಂಟಲು ದ್ರವ ಮಾದರಿಗಳನ್ನು ವಂಶವಾಹಿ ಅನುಕ್ರಮಣಿಕೆ (ಜಿನೋಮ್‌ ಸೀಕ್ವೆನ್ಸಿಂಗ್) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT