ADVERTISEMENT

ಕೋವಿಡ್‌: ಅಫ್ಘಾನಿಸ್ಥಾನ, ಫಿಲಿಪೈನ್ಸ್‌, ಮಲೇಷ್ಯಾ ಪ್ರಯಾಣಿಕರಿಗೆ ಭಾರತ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 6:12 IST
Last Updated 17 ಮಾರ್ಚ್ 2020, 6:12 IST
   

ನವದೆಹಲಿ: ಕೋವಿಡ್–19 ಸೋಂಕುವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಭಾರತ ಸರ್ಕಾರಅಫ್ಘಾನಿಸ್ಥಾನ, ಫಿಲಿಪೈನ್ಸ್ ಮತ್ತು ಮಲೇಷ್ಯಾದ ಪ್ರಯಾಣಿಕರಿಗೆ ಮಾರ್ಚ್‌ 31ರವರೆಗೆ ನಿರ್ಬಂಧವಿಧಿಸಿದೆ.

ಕೋವಿಡ್‌–19 ಸೋಂಕುಹರಡುತ್ತಿರುವುದನ್ನು ತಡೆಯಲು ಟರ್ಕಿ ದೇಶವು ಯೂರೋಪ್‌ನ 9 ದೇಶಗಳ ಪ್ರಯಾಣಿಕರಿಗೆ ಪ್ರವೇಶವನ್ನು ಮಾರ್ಚ್‌ 28ರವರೆಗೆ ನಿರ್ಬಂಧಹೇರಿ ಆದೇಶ ಹೊರಡಿಸಿದೆ.

ಕೋವಿಡ್‌–19 ಸೋಂಕಿಗೆ ಜಗತ್ತಿನಾದ್ಯಂತಒಟ್ಟು 7,174 ಜನರು ಮೃತಪಟ್ಟಿದ್ದು, 1,82,725 ಜನರು ಸೋಂಕುಪೀಡಿತರಾಗಿದ್ದಾರೆ. ಭಾರತದಲ್ಲಿ ಒಟ್ಟು 127 ಜನರಿಗೆ ಕೊರೊನಾ ವೈರಸ್‌ ತಗುಲಿದ್ದು ಮೂವರು ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.