ADVERTISEMENT

ಓಮೈಕ್ರಾನ್‌ ಬಿಎ.4 ಸೋಂಕಿತ ಯುವತಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 23 ಮೇ 2022, 19:30 IST
Last Updated 23 ಮೇ 2022, 19:30 IST
   

ಚೆನ್ನೈ: ಕೊರೊನ ವೈರಾಣುವಿನ ರೂಪಾಂತರ ತಳಿ ಓಮೈಕ್ರಾನ್‌ ಬಿಎ.4 ಸೋಂಕಿಗೆ ಒಳಗಾಗಿದ್ದ ತಮಿಳುನಾಡಿದ 19 ವರ್ಷದ ಯುವತಿ ಈಗ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದಾಳೆ ಎಂದು ತಮಿಳುನಾಡು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಇದು ತಮಿಳುನಾಡಿನ ಪ್ರಥಮಓಮೈಕ್ರಾನ್‌ ಬಿಎ.4 ಸೋಂಕು ಪ್ರಕರಣವಾಗಿದ್ದು, ತಮಿಳುನಾಡಿನ ಬೇರೆ ಯಾವುದೇ ಭಾಗಕ್ಕೆ ಸೋಂಕು ಹರಡಿಲ್ಲ ಎಂದು ಎಂದು ಅವರು ದೃಢಪಡಿಸಿದ್ದಾರೆ.

ನಾಲ್ವರು ಸದಸ್ಯರಿರುವ ಯುವತಿಯ ಕುಟುಂಬ ಎಲ್ಲಿಗೂ ಪ್ರಯಾಣ ಮಾಡಿರಲಿಲ್ಲ. ಯುವತಿ ಜೊತೆ ಆಕೆಯ ತಾಯಿ ಕೂಡಾ ಕೋವಿಡ್‌ ಸೋಂಕಿಗೆ ಒಳಗಾಗಿದ್ದರು. ಆದರೆ ಪರೀಕ್ಷೆಯಲ್ಲಿ ಅವರು ಓಮೈಕ್ರಾನ್‌ ಬಿಎ.2 ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿತ್ತು. ತಾಯಿ ಮಗಳು ಇಬ್ಬರೂ‍ಪ್ರತ್ಯೇಕವಾಗಿ ಇದ್ದು ಚಿಕಿತ್ಸೆ ಪಡೆದಿದ್ದರು. ಇಬ್ಬರೂ ಸೋಂಕು ಮುಕ್ತರಾಗಿದ್ದಾರೆ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.