ADVERTISEMENT

ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಭಾರತೀಯ ಪ್ರವಾಸೋದ್ಯಮ: ಶೀಘ್ರ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 10:39 IST
Last Updated 23 ಏಪ್ರಿಲ್ 2020, 10:39 IST
   

ನವದೆಹಲಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭಾರತದ ಪ್ರವಾಸೋದ್ಯಮವು ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ಸರ್ಕಾರವು ಶೀಘ್ರ ಕ್ರಮಕೈಗೊಳ್ಳಬೇಕೆಂದು ಭಾರತೀಯ ಪ್ರವಾಸೋದ್ಯಮ ಮತ್ತು ಆತಿಥ್ಯ ಸಂಘಗಳ ಒಕ್ಕೂಟ(ಎಫ್‌ಎಐಟಿಎಚ್‌) ಆಗ್ರಹಿಸಿದೆ.

ಲಾಕ್‌ಡೌನ್‌ ಕ್ರಮದಿಂದ ₹ 5 ಲಕ್ಷ ಕೋಟಿಯ, ಅಂದಾಜು 3.8 ಕೋಟಿ ಉದ್ಯೋಗಗಳನ್ನು ಹೊಂದಿರುವ ಭಾರತದ ಪ್ರವಾಸೋದ್ಯಮ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದೆ ಎಂದು ಎಫ್‌ಎಐಟಿಎಚ್‌ ತಿಳಿಸಿದೆ.

ಪ್ರವಾಸೋದ್ಯಮದ ಮೂಲಕ ಬರುತ್ತಿದ್ದ ಹಣವು ಸಂಪರ್ಣವಾಗಿ ನಿಂತಿದೆ. ಪ್ರವಾಸೋದ್ಯಮದ ಮೇಲೆ ಅವಲಂಭಿತರಾಗಿದ್ದ ಜನರು ಆರ್ಥಿಕವಾಗಿ ದಿವಾಳಿ ಅಂಚಿನಲ್ಲಿದ್ದಾರೆ. ಈ ವಿಚಾರವಾಗಿ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಎಫ್‌ಎಐಟಿಎಚ್‌ ಒತ್ತಾಯಿಸಿದೆ.

ADVERTISEMENT

ಸಂಕಷ್ಟದಲ್ಲಿ ಸಿಲುಕಿರುವ ನೌಕರರಿಗೆ ಹಣಕಾಸು ಮತ್ತು ಪ್ರವಾಸೋದ್ಯಮ ಸಚಿವಾಲಯದಿಂದ ಕೋವಿಡ್‌ ಪರಿಹಾರ ನಿಧಿ ಬೇಕೆಂದು ಆಗ್ರಹಿಸಲಾಗಿದೆ.

ದೇಶದಾದ್ಯಂತ ದಾಖಲಾಗಿರುವ ಒಟ್ಟು 21,393 ಕೋವಿಡ್‌–19 ಪ್ರಕರಣಗಳ ಪೈಕಿ 4,257 ಮಂದಿ ಗುಣಮುಖರಾಗಿದ್ದಾರೆ. ವಿವಿಧ ರಾಜ್ಯಗಳಲ್ಲಿ 16,454 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 681 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.