ADVERTISEMENT

ಕೋವಿಡ್‌ ಹೆಚ್ಚಳ | ಚಾರ್‌ಧಾಮ್ ಯಾತ್ರೆ ಮುಂದೂಡಿಕೆ: ತೀರಥ್‌ಸಿಂಗ್ ರಾವತ್ ಆದೇಶ

ಪಿಟಿಐ
Published 29 ಏಪ್ರಿಲ್ 2021, 9:44 IST
Last Updated 29 ಏಪ್ರಿಲ್ 2021, 9:44 IST
ತೀರಥ್ ಸಿಂಗ್ ರಾವತ್‌(ಬಲಬದಿಯಲ್ಲಿರುವವರು)– (ಪಿಟಿಐ ಸಂಗ್ರಹ ಚಿತ್ರ)
ತೀರಥ್ ಸಿಂಗ್ ರಾವತ್‌(ಬಲಬದಿಯಲ್ಲಿರುವವರು)– (ಪಿಟಿಐ ಸಂಗ್ರಹ ಚಿತ್ರ)   

ಡೆಹ್ರಾಡೂನ್: ‘ಉತ್ತರಾಖಂಡದ ಹಿಮಾಲಯದನಾಲ್ಕು ಪ್ರಸಿದ್ಧ ಕ್ಷೇತ್ರಗಳಿಗೆ ಮುಂದಿನ ತಿಂಗಳಿನಿಂದ ಆರಂಭವಾಗಬೇಕಿದ್ದ ‘ಚಾರ್‌ಧಾಮ್‌ ಯಾತ್ರೆ’ಯನ್ನು ಮುಂದೂಡಲಾಗಿದೆ‘ ಎಂದು ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ಸಿಂಗ್ ರಾವತ್ ತಿಳಿಸಿದ್ದಾರೆ.

ದೇಶದಾದ್ಯಂತ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ಚಾರ್‌ಧಾಮ್ ಯಾತ್ರೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ತೀರಥ್‌ ಸಿಂಗ್‌ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಆದರೂ ಹಿಮಾಲಯ ಶ್ರೀಕ್ಷೇತ್ರಗಳೆಂದೇ ಕರೆಯುವ ಬದ್ರಿನಾಥ, ಕೇದಾರನಾಥ , ಗಂಗೋತ್ರಿ ಮತ್ತು ಯಮುನೋತ್ರಿಯಲ್ಲಿರುವ ದೇವಾಲಯಗಳಲ್ಲಿ ನಿಗದಿಯಂತೆ ಪೂಜೆ, ಪ್ರಾರ್ಥನೆ ನಡೆಸಲು ಅರ್ಚಕರಿಗೆ ಅನುಮತಿ ನೀಡಲಾಗಿದೆ. ಈ ಅನುಮತಿ ಅರ್ಚಕರಿಗೆ ಹೊರತು, ಭಕ್ತರಿಗೆ ಅಲ್ಲ‘ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

‌ಉತ್ತರಾಖಂಡ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಈ ತೀರ್ಮಾನ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.