ADVERTISEMENT

ಕೋವಿಡ್‌ 3ನೇ ಅಲೆ: ಮುಂದಿನ 100 ದಿನಗಳು ಅತ್ಯಂತ ನಿರ್ಣಾಯಕ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 4:32 IST
Last Updated 17 ಜುಲೈ 2021, 4:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಂಭಾವ್ಯ ಮೂರನೇ ಅಲೆ ತೀವ್ರಗೊಳ್ಳುವುದನ್ನು ತಡೆಯಲು ಮುಂದಿನನೂರು ದಿನಗಳು ಅತ್ಯಂತ ಮುಖ್ಯ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್‌ ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿ ಇದು ಆರನೇ ತಿಂಗಳು. 45 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರ ಪೈಕಿ ಸುಮಾರು ಶೇ 50ರಷ್ಟು ಜನರಿಗೆ ಕನಿಷ್ಠ ಒಂದು ಡೋಸ್‌ ಲಸಿಕೆಯನ್ನು ಈಗಾಗಲೇ ನೀಡಲಾಗಿದೆ ಎಂದು ವಿ.ಕೆ. ಪಾಲ್‌ ಹೇಳಿದ್ದಾರೆ.

‘45 ವರ್ಷದಿಂದ ಮೇಲಿನ ಸುಮಾರು ಶೇ 50ರಷ್ಟು ಜನರಿಗೆ ಲಸಿಕೆ ಹಾಕಲಾಗಿದೆ. ಇದು ಕೋವಿಡ್‌ ಮರಣ ಪ್ರಮಾಣ ತಗ್ಗಿಸಲಿದೆ. ಆದರೆ, ಕೆಲವು ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆ ವೇಗವಾಗಿಯೇ ಇರುವುದು ಕಳವಳಕಾರಿ’ ಎಂದು ಅವರು ಹೇಳಿದ್ದಾರೆ.

ADVERTISEMENT

45 ವರ್ಷಕ್ಕಿಂತ ಮೇಲ್ಪಟ್ಟ 17 ಕೋಟಿಗೂ ಹೆಚ್ಚು ಜನರು ಲಸಿಕೆಯ ಕನಿಷ್ಠ ಒಂದು ಡೋಸ್‌ ಮತ್ತು ಆರು ಕೋಟಿ ಜನರು ಎರಡೂ ಡೋಸ್‌ ಹಾಕಿಸಿಕೊಂಡಿದ್ದಾರೆ. 60 ವರ್ಷ ದಾಟಿದವರಲ್ಲಿ ಶೇ 50ಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಿಸುವಿಕೆಯ ಮೈಲುಗಲ್ಲನ್ನು ಕಳೆದ ತಿಂಗಳೇ ಸಾಧಿಸಲಾಗಿದೆ. ಹೀಗಾಗಿ, ಕೋವಿಡ್‌ನಿಂದ ತೀವ್ರ ಸಮಸ್ಯೆಗೆ ಒಳಗಾಗುವ ಜನರ ಪ್ರಮಾಣವನ್ನು ಕಡಿಮೆಗೊಳಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.