ನವದೆಹಲಿ: ರಾಷ್ಟ್ರದಲ್ಲಿ ಬುಧವಾರ ಒಂದೇ ದಿನ 2,927 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕೋವಿಡ್ ಕಾರಣದಿಂದ 32 ಮಂದಿ ಮೃತ ಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಬುಧವಾರ ಮೃತಪಟ್ಟವರ ಪೈಕಿ ಕೇರಳದ 26, ಮಹಾರಾಷ್ಟ್ರದ 4 ಮಂದಿ ಸೇರಿದ್ದಾರೆ. ದೆಹಲಿಹಾಗೂ ಮಿಜೋರಾಂನಲ್ಲಿ ತಲಾ 1 ಸಾವು ಸಂಭವಿಸಿದೆ.
ದೇಶದಲ್ಲಿ ಇದುವರೆಗಿನ ಕೋವಿಡ್ ಪ್ರಕರಣಗಳ ಸಂಖ್ಯೆ 4,30,65,496 ಕ್ಕೆ ತಲುಪಿದೆ. ಈ ಪೈಕಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 16,279 ಆಗಿದೆ.
ಕೋವಿಡ್ ಕಾರಣದಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ 5,23,654 ಕ್ಕೆ ತಲುಪಿದೆ.
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ಗೆ ಕೋವಿಡ್ ಪಾಸಿಟಿವ್
ಕೋವಿಡ್ ಕಾರಣದಿಂದ ಅತಿಹೆಚ್ಚು ಸಾವು ಸಂಭವಿಸಿದ ರಾಜ್ಯಗಳ ಪಟ್ಟಿ
1. ಮಹಾರಾಷ್ಟ್ರ - 1,47,838
2. ಕೇರಳ - 68,916
3. ಕರ್ನಾಟಕ - 40,057
4. ತಮಿಳುನಾಡು - 38,025
5. ದೆಹಲಿ - 26,169
6. ಉತ್ತರ ಪ್ರದೇಶ - 23,505
7. ಪಶ್ಚಿಮ ಬಂಗಾಳ - 21,201
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.