ADVERTISEMENT

ಫೆ.21ರಿಂದ ಪುರಿ ಜಗನ್ನಾಥ ದೇಗುಲಕ್ಕೆ ಭೇಟಿ ನೀಡಲು ಕೋವಿಡ್‌ ಲಸಿಕೆಯ ಅಗತ್ಯವಿಲ್ಲ

ಪಿಟಿಐ
Published 15 ಫೆಬ್ರುವರಿ 2022, 6:29 IST
Last Updated 15 ಫೆಬ್ರುವರಿ 2022, 6:29 IST
ಪುರಿ ಜಗನ್ನಾಥ ದೇಗುಲ (ಪಿಟಿಐ ಚಿತ್ರ)
ಪುರಿ ಜಗನ್ನಾಥ ದೇಗುಲ (ಪಿಟಿಐ ಚಿತ್ರ)   

ಪುರಿ: ರಾಷ್ಟ್ರದಾದ್ಯಂತ ಕೋವಿಡ್‌ 19 ಸೋಂಕು ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಜಗನ್ನಾಥ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ಲಸಿಕೆ ಕಡ್ಡಾಯ ನಿಯಮವನ್ನು ಫೆಬ್ರುವರಿ 21ರಿಂದ ರದ್ದುಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ಫೆ.21ರಿಂದ ದೇಗುಲಕ್ಕೆ ಭೇಟಿ ನೀಡುವ ಭಕ್ತರು ಎರಡು ಡೋಸ್‌ ಲಸಿಕೆ ಪಡೆದಿರುವ ದಾಖಲೆಗಳನ್ನು ತೋರಿಸುವ ಅಗತ್ಯವಿಲ್ಲ. ಆರ್‌ಟಿ ಪಿಸಿಆರ್‌ ಪರೀಕ್ಷೆಯ ಫಲಿತಾಂಶವನ್ನು ತೋರಿಸಬೇಕಿಲ್ಲ ಎಂದು ಶ್ರೀ ಜಗನ್ನಾಥ ದೇವಸ್ಥಾನ ಆಡಳಿತ ಮಂಡಳಿ (ಎಸ್‌ಜೆಟಿಎ) ತಿಳಿಸಿದೆ.

ಹೆಚ್ಚಿನ ಮಂದಿ ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಕೋವಿಡ್‌ ಪ್ರಕರಣಗಳು ಇಳಿಮುಖವಾಗಿವೆ. ಹಾಗಾಗಿ ಲಸಿಕೀಕರಣದ ದಾಖಲೆಗಳ ಕಡ್ಡಾಯ ನಿಯಮವನ್ನು ಕೈಬಿಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಎಸ್‌ಜೆಟಿಎ ಮುಖ್ಯಸ್ಥ ಕೃಷನ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ಫೆಬ್ರುವರಿ 1ಕ್ಕೆ ಜಗನ್ನಾಥ ದೇಗುಲ ಭಕ್ತರ ದರ್ಶನಕ್ಕೆ ಮುಕ್ತವಾಗಿತ್ತು. 20 ದಿನಗಳ ಕಾಲ ದೇವಸ್ಥಾನದ ಬಾಗಿಲು ಮುಚ್ಚಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.