ADVERTISEMENT

ಕೋವಿಡ್ ಪೀಡಿತರ ಸಂಖ್ಯೆ ದ್ವಿಗುಣ ಅವಧಿ ಹೆಚ್ಚಳ: ಯಾವ ರಾಜ್ಯದಲ್ಲಿ ಎಷ್ಟು ದಿನ?

ಏಜೆನ್ಸೀಸ್
Published 30 ಏಪ್ರಿಲ್ 2020, 12:51 IST
Last Updated 30 ಏಪ್ರಿಲ್ 2020, 12:51 IST
ಕೊರೊನಾ ವೈರಸ್‌ ಸೋಂಕು ಪ್ರಕರಣಗಳು– ಸಾಂಕೇತಿಕ ಚಿತ್ರ
ಕೊರೊನಾ ವೈರಸ್‌ ಸೋಂಕು ಪ್ರಕರಣಗಳು– ಸಾಂಕೇತಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುವ ಅವಧಿ 3.4 ದಿನಗಳಿಂದ 11 ದಿನಗಳ ವರೆಗೂ ವಿಸ್ತರಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಅಮೆರಿಕ, ಇಟಲಿ, ಸ್ಪೇನ್‌ ಹಾಗೂ ಬ್ರಿಟನ್‌ ಸೇರಿದಂತೆ ಹಲವು ರಾಷ್ಟ್ರಗಳಿಗಿಂತ ಸೋಂಕು ವ್ಯಾಪಿಸುತ್ತಿರುವ ಪ್ರಮಾಣ ಭಾರತದಲ್ಲಿ ತಗ್ಗಿರುವುದಾಗಿ ತಿಳಿದು ಬಂದಿದೆ.

ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗಿಂತಲೂ ಭಾರತದಲ್ಲಿ ಕೋವಿಡ್‌–19ನಿಂದ ಸಾವಿಗೀಡಾದವರ ಸಂಖ್ಯೆ ಕಡಿಮೆ ಇದೆ.ಪ್ರಸ್ತುತ ಭಾರತದಲ್ಲಿ 33,610 ಪ್ರಕರಣಗಳು ದಾಖಲಾಗಿದ್ದು, ಸಾವಿಗೀಡಾದವರ ಸಂಖ್ಯೆ 1,075ಮುಟ್ಟಿದೆ.ಪ್ರಕರಣ ದ್ವಿಗುಣಗೊಳ್ಳುವಅವಧಿ 11 ದಿನಗಳವರೆಗೂ ಹೆಚ್ಚಿದೆ.

ರಾಜ್ಯವಾರ ಪ್ರಕರಣಗಳು ದುಪ್ಪಟ್ಟು ಅವಧಿ: ಯಾವ ರಾಜ್ಯದಲ್ಲಿ ಎಷ್ಟು ದಿನ?

ADVERTISEMENT

* 11 ದಿನಗಳಿಂದ 20 ದಿನಗಳು

ದೆಹಲಿ 11.3 ದಿನಗಳು
ಉತ್ತರ ಪ್ರದೇಶ 12ದಿನಗಳು
ಜಮ್ಮು ಮತ್ತು ಕಾಶ್ಮೀರ 12.2ದಿನಗಳು
ಒಡಿಶಾ 13ದಿನಗಳು
ರಾಜಸ್ಥಾನ 17.8 ದಿನಗಳು
ತಮಿಳುನಾಡು 19.1ದಿನಗಳು
ಪಂಜಾಬ್‌ 19.5ದಿನಗಳು

* 20 ದಿನಗಳಿಂದ 40 ದಿನಗಳು

ಕರ್ನಾಟಕ 21.6ದಿನಗಳು
ಲಡಾಕ್‌ 24.2ದಿನಗಳು
ಹರಿಯಾಣ 24.4ದಿನಗಳು
ಉತ್ತರಾಖಂಡ 30.3ದಿನಗಳು
ಕೇರಳ 37.5ದಿನಗಳು

* 40 ದಿನಗಳಿಗಿಂತಲೂ ಹೆಚ್ಚು

ಅಸ್ಸಾಂ 59ದಿನಗಳು
ತೆಲಂಗಾಣ 70.8ದಿನಗಳು
ಛತ್ತೀಸ್‌ಗಢ 89.7ದಿನಗಳು
ಹಿಮಾಚಲ ಪ್ರದೇಶ 191.6ದಿನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.