ADVERTISEMENT

‘ಕೋವೊವಾಕ್ಸ್‌’ನ ಕ್ಲಿನಿಕಲ್‌ ಟ್ರಯಲ್‌ ಆರಂಭ; ಸೆಪ್ಟೆಂಬರ್‌ನಲ್ಲಿ ಲಸಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 10:25 IST
Last Updated 27 ಮಾರ್ಚ್ 2021, 10:25 IST
ಅದಾರ್ ಪೂನಾವಾಲಾ
ಅದಾರ್ ಪೂನಾವಾಲಾ   

ನವದೆಹಲಿ: ‘ಭಾರತದಲ್ಲಿ ಕೋವಿಡ್‌ ಲಸಿಕೆ ‘ಕೋವೊವಾಕ್ಸ್‌’ನ ಕ್ಲಿನಿಕಲ್‌ ಪ್ರಯೋಗಗಳು ಪ್ರಾರಂಭವಾಗಿದ್ದು, ಸೆಪ್ಟೆಂಬರ್‌ ವೇಳೆಗೆ ಈ ಲಸಿಕೆಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ’ ಎಂದು ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ (ಎಸ್‌ಐಐ) ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್ ಪೂನಾವಾಲಾ ಶನಿವಾರ ತಿಳಿಸಿದ್ದಾರೆ.

ಅಮೆರಿಕದ ನೊವಾವಾಕ್ಸ್ ಲಸಿಕೆ ಕಂಪನಿಯು, ‘ಎನ್‌ವಿಎಕ್ಸ್‌–ಕೋವ್‌2373’ ಅಭಿವೃದ್ಧಿಪಡಿಸಲು ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಎಸ್‌ಐಐ ಜತೆ ಲೈಸನ್ಸ್‌ ಒಪ್ಪಂದ ಮಾಡಿಕೊಂಡಿದೆ.

‘ಭಾರತದಲ್ಲಿ ಕೊನೆಗೂ ಕೋವೊವಾಕ್ಸ್‌ ಕ್ಲಿನಿಕಲ್‌ ಟ್ರಯಲ್‌ ಆರಂಭವಾಗಿದೆ. ಈ ಲಸಿಕೆಯನ್ನು ನೋವಾವಾಕ್ಸ್‌ ಮತ್ತು ಎಸ್‌ಐಐ ಸಹಭಾಗಿತ್ವದಲ್ಲಿ ಅಭಿವೃದ್ದಿಪಡಿಸಲಾಗಿದೆ. ಇದನ್ನು ಆಫ್ರಿಕಾ ಮತ್ತು ಬ್ರಿಟನ್‌ನ ರೂಪಾಂತರ ಕೋವಿಡ್‌–19 ಮೇಲೆಯೂ ಪರೀಕ್ಷಿಸಲಾಗಿದೆ.ಇದು ಶೇಕಡ 89ರಷ್ಟು ಪರಿಣಾಮಕಾರಿ ಆಗಿದೆ. ಈ ಕೋವಿಡ್‌ ಲಸಿಕೆಯನ್ನು ಸೆಪ್ಟೆಂಬರ್‌ 2021ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ’ ಎಂದು ಪೂನಾವಾಲಾ ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.