ADVERTISEMENT

ಸಗಣಿ ತಟ್ಟುವ ಮೂಲಕ ಪ್ರಾಂಶುಪಾಲರ ಕಚೇರಿ ವಿರೂಪ!

ಪಿಟಿಐ
Published 15 ಏಪ್ರಿಲ್ 2025, 14:44 IST
Last Updated 15 ಏಪ್ರಿಲ್ 2025, 14:44 IST
ಲಕ್ಷ್ಮೀಬಾಯಿ ಕಾಲೇಜಿನ ಪ್ರಾಂಶುಪಾಲರ ಕಚೇರಿಯ ಗೋಡೆಗೆ ಮಂಗಳವಾರ ಸಗಣಿ ತಟ್ಟಿದ ಡಿಯುಎಸ್‌ಯು ಅಧ್ಯಕ್ಷ ರೋನಕ್‌ ಖತ್ರಿ    ಪಿಟಿಐ ಚಿತ್ರ
ಲಕ್ಷ್ಮೀಬಾಯಿ ಕಾಲೇಜಿನ ಪ್ರಾಂಶುಪಾಲರ ಕಚೇರಿಯ ಗೋಡೆಗೆ ಮಂಗಳವಾರ ಸಗಣಿ ತಟ್ಟಿದ ಡಿಯುಎಸ್‌ಯು ಅಧ್ಯಕ್ಷ ರೋನಕ್‌ ಖತ್ರಿ    ಪಿಟಿಐ ಚಿತ್ರ   

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ (ಡಿಯುಎಸ್‌ಯು) ಅಧ್ಯಕ್ಷ ರೋನಕ್‌ ಖತ್ರಿ ಅವರು ಲಕ್ಷ್ಮೀಬಾಯಿ ಕಾಲೇಜಿನ ಪ್ರಾಂಶುಪಾಲರ ಕಚೇರಿಯ ಗೋಡೆಗೆ ಮಂಗಳವಾರ ಸಗಣಿ ತಟ್ಟುವ ಮೂಲಕ ವಿರೂಪಗೊಳಿಸಿದರು.

‘ಸಗಣಿ ಲೇಪಿಸುವುದರಿಂದ ತಂಪಾಗಿರುತ್ತದೆ ಎನ್ನುವುದಾದರೆ, ನಿಮ್ಮ ಕಚೇರಿಗೆ ಎ.ಸಿ. ಏಕೆ ಬೇಕು? ಸಗಣಿಯನ್ನೇ ಬಳಿಯುತ್ತೇವೆ’ ಎಂದು ಪ್ರಾಂಶುಪಾಲರ ಕಚೇರಿಯ ಗೋಡೆಗೆ ಹಸುವಿನ ಸಗಣಿ ಅಂಟಿಸಿದರು.

‘ನೀವು ಸಂಶೋಧನೆ ಮಾಡಲು ಬಯಸಿದರೆ, ಅದನ್ನು ನಿಮ್ಮ ಮನೆಯಲ್ಲೇ ಮಾಡಿ’ ಎಂದು ಪ್ರಾಂಶುಪಾಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕಾಲೇಜಿನ ಪ್ರಾಂಶುಪಾಲರಾದ ಪ್ರತ್ಯುಷ್‌ ವತ್ಸಲಾ ಅವರು ತಮ್ಮ ಕಾಲೇಜಿನ ಗೋಡೆಗಳಿಗೆ ಸಗಣಿ ಲೇಪಿಸಿರುವ ವಿಡಿಯೊವೊಂದನ್ನು ಏ. 13ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ‘ತಂಪಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದು ಸಂಶೋಧನೆಯ ಭಾಗ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.