ADVERTISEMENT

ಶ್ರೀಕೃಷ್ಣನ ಕೊಳಲ ನಾದಕ್ಕೆ ಹಸು ಹೆಚ್ಚು ಹಾಲು ನೀಡುತ್ತದೆ: ಬಿಜೆಪಿ ಶಾಸಕ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 10:14 IST
Last Updated 27 ಆಗಸ್ಟ್ 2019, 10:14 IST
   

ಗುವಾಹಟಿ: ಶ್ರೀಕೃಷ್ಣನಂತೆ ಕೊಳಲೂದಿ ನಾದ ಹೊಮ್ಮಿಸಿದರೆ ಹಸುಗಳು ಹೆಚ್ಚು ಹಾಲು ನೀಡುತ್ತವೆ ಎಂದು ಅಸ್ಸಾಂನ ಬಿಜೆಪಿ ಶಾಸಕ ದಿಲೀಪ್ ಕುಮಾರ್ಪೌಲ್ ಹೇಳಿದ್ದಾರೆ.

ಇಲ್ಲಿನ ಬರಾಕ್ ಕಣಿವೆಯ ಸಿಲಾಚರ್‌ ಕ್ಷೇತ್ರದ ಹಿರಿಯ ಶಾಸರಾಗಿದ್ದಾರೆ ಪೌಲ್.ಸಂಗೀತ ಮತ್ತು ನೃತ್ಯದ ಧನಾತ್ಮಕ ಪ್ರಭಾವಗಳ ಬಗ್ಗೆ ನಾನು ಜನರಿಗೆ ಹೇಳಿದ್ದೇನೆ. ಅದೇ ರೀತಿ ಶ್ರೀಕೃಷ್ಣನ ಕೊಳಲ ದನಿಯಂತಿರುವ ರಾಗವನ್ನು ಹಸುಗಳು ಕೇಳಿಸಿಕೊಂಡರೆ ಅವುಗಳ ಹಾಲು ಉತ್ಪಾದನೆಯೂ ಜಾಸ್ತಿಯಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಪೌಲ್ ಮಂಗಳವಾರ ಹೇಳಿದ್ದಾರೆ.

ಅಂದಹಾಗೆ ಯಾವ ಅಧ್ಯಯನವನ್ನು ಆಧರಿಸಿ ನೀವು ಈ ರೀತಿ ಹೇಳುತ್ತಿದ್ದೀರಿ ಎಂದು ಕೇಳಿದಾಗ, ಗುಜರಾತ್ ಮೂಲದ ಎನ್‌ಜಿಒ ಕೆಲವು ವರ್ಷಗಳ ಹಿಂದೆ ಅಧ್ಯಯನ ನಡೆಸಿದ್ದು,ಕೊಳಲು ನಾದದಿಂದ ಹಸುಗಳಲ್ಲಿ ಹಾಲು ಹೆಚ್ಚಾತ್ತದೆ ಎಂಬುದನ್ನು ಸಾಬೀತು ಪಡಿಸಿತ್ತು ಎಂದಿದ್ದಾರೆ.

ವಿದೇಶಿ ತಳಿಯ ಹಸುಗಳು ಅಚ್ಚ ಬಿಳಿ ಬಣ್ಣದ ಹಾಲು ನೀಡುತ್ತಿದ್ದರೆ ಭಾರತದ ಹಸುಗಳು ತುಸು ಹಳದಿ ಮಿಶ್ರಿತ ಬಿಳಿ ಬಣ್ಣದ ಹಾಲು ನೀಡುತ್ತವೆ. ಇದು ಹೆಚ್ಚು ರುಚಿಕರ ಮತ್ತು ಆರೋಗ್ಯಕರವಾಗಿರುತ್ತವೆ. ದೇಸಿ ಹಸುಗಳ ಹಾಲಿನಿಂದ ತಯಾರಿಸಿದ ಗಿಣ್ಣು, ಬೆಣ್ಣೆ ಮೊದಲಾದ ಉತ್ಪನ್ನಗಳು ವಿದೇಶಿ ಹಸುಗಳ ಹಾಲಿನ ಉತ್ಪನ್ನಗಳಿಂತ ರುಚಿಯಾಗಿರುತ್ತವೆ ಎಂದ ಶಾಸಕರು ಭಾರತದಿಂದ ಬಾಂಗ್ಲಾದೇಶಕ್ಕೆ ಹಸು ಕಳ್ಳಸಾಗಣಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ.

ಬಾಂಗ್ಲಾದೇಶಕ್ಕೆ ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ ಮತ್ತು ತ್ರಿಪುರಾ ಮೂಲಕ ಭಾರತದ ಹಸುಗಳು ಕಳ್ಳಸಾಗಣಿಕೆಯಾಗುತ್ತಿವೆ. ನಾವು ಹಸುವನ್ನು ಗೋಮಾತೆ ಎಂದು ಕರೆಯುತ್ತೇವೆ. ಆದರೆ ಬಾಂಗ್ಲಾದೇಶಕ್ಕೆ ಪ್ರತಿ ವರ್ಷ ಸಾವಿರಾರು ಹಸುಗಳು ಕಳ್ಳ ಸಾಗಣಿಕೆಯಾಗುತ್ತಿವೆ. ಇದು ನಿಲ್ಲಬೇಕು ಎಂದಿದ್ದಾರೆ.
ಶ್ರೀಕೃಷ್ಣನ ಕೊಳಲಿನ ದನಿಗೆ ಹಸುಗಳು ಹೆಚ್ಚು ಹಾಲು ಉತ್ಪಾದಿಸುತ್ತವೆ ಎಂಬ ಪೌಲ್ ಅವರ ವಾದ ಚರ್ಚಾಸ್ಪದವೇ ಆಗಿದ್ದರು 2001ರಲ್ಲಿ ಯುನಿವರ್ಸಿಟಿ ಆಫ್ ಲೇಸ್ಟರ್‌ನ ಇಬ್ಬರು ಮನಶಾಸ್ತ್ರಜ್ಞರು ಹಸುಗಳು ಹಿತವಾದಮತ್ತು ಮಂದಗತಿಯಸಂಗೀತವನ್ನು ಆಲಿಸಿದರೆ ಶೇ. 3ರಷ್ಟು ಹೆಚ್ಚು ಹಾಲು ಉತ್ಪಾದಿಸುತ್ತವೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.