ಗುಂಡಿನ ದಾಳಿ (ಸಾಂದರ್ಭಿಕ ಚಿತ್ರ)
ಸೋನಿಪತ್: ಹರಿಯಾಣದ ಸೋನಿಪತ್ ಜಿಲ್ಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು ನಡೆಸಿದ ಗುಂಡಿನ ದಾಳಿಯಲ್ಲಿ ಸಿಆರ್‌ಪಿಎಫ್ ಯೋಧ ಕೃಷ್ಣ (30) ಮೃತಪಟ್ಟಿದ್ದಾರೆ.
ಸೋಮವಾರ ಮುಂಜಾನೆ ಕೃಷ್ಣ ಅವರು ಮನೆಗೆ ಬರುತ್ತಿದ್ದಾಗ ಈ ದಾಳಿ ನಡೆದಿದೆ. ಕೆಲ ದಿನಗಳ ಹಿಂದೆ ಕಾವಡ್ ಯಾತ್ರೆ ವೇಳೆ ಕೃಷ್ಣ ಅವರೊಂದಿಗೆ ಗ್ರಾಮದ ಕೆಲ ಯುವಕರು ಜಗಳವಾಡಿದ್ದರು. ಅವರೇ ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಸದರ್ ಗುಹಾನ ಠಾಣೆ ಇನ್‌ಸ್ಪೆಕ್ಟರ್ ಲಾಲ್ ಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.