ADVERTISEMENT

ಲಾಕ್‌ಡೌನ್‌ ತೆರವು: ಜೂನ್‌ 8ರಿಂದ ತೆರೆಯಲಿವೆ 3000ಕ್ಕೂ ಹೆಚ್ಚು ಸ್ಮಾರಕಗಳು 

ಪಿಟಿಐ
Published 7 ಜೂನ್ 2020, 10:31 IST
Last Updated 7 ಜೂನ್ 2020, 10:31 IST
ವಿಜಯಪುರದ ಗೋಳ ಗುಮ್ಮಟ
ವಿಜಯಪುರದ ಗೋಳ ಗುಮ್ಮಟ   

ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾಸಂಸ್ಥೆಯು (ಎಎಸ್‌ಐ) ನಿರ್ವಹಿಸುತ್ತಿರುವ 3000ಕ್ಕೂ ಹೆಚ್ಚು ಸ್ಮಾರಕಗಳನ್ನು ಸೋಮವಾರದಿಂದ ತೆರೆಯಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್‌ ಪಟೇಲ್‌ ತಿಳಿಸಿದ್ದಾರೆ.

ಕೋವಿಡ್‌ಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ನಿಯಮಗಳನ್ನು ಸ್ಮಾರಕಗಳ ಅಧಿಕಾರಿಗಳು ಅನುಸರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ದೇಶದಾದ್ಯಂತ 3691 ಸಂರಕ್ಷಿತ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳನ್ನು ಎಎಸ್‌ಐ ನಿರ್ವಹಿಸುತ್ತಿದ್ದು, ಕೋವಿಡ್‌ ಕಾರಣದಿಂದಾಗಿ ಮಾರ್ಚ್‌ 17ರಂದು ಅವುಗಳನ್ನು ಮುಚ್ಚಲು ಆದೇಶಿಸಲಾಗಿತ್ತು.

ADVERTISEMENT

ಈ ತಾಣಗಳಿಗೆ ಭೇಟಿ ನಿಡುವ ಪ್ರವಾಸಿಗರಿಗೆ ಇ–ಟಿಕೆಟ್‌ ಪಡೆಯುವುದನ್ನು ಮತ್ತು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸುವ ನಿಯಮ ಜಾರಿಯಾಗಬಹುದು ಎಂದು ಎಎಸ್‌ಐ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.