ADVERTISEMENT

ಅತಿ ಗಣ್ಯರ ಪ್ರಯಾಣಕ್ಕೆ ಬಿ777 ವಿಮಾನ

ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಯವರ ಪ್ರಯಾಣಕ್ಕಾಗಿ ವಿಶೇಷವಾಗಿ ನಿರ್ಮಿತ ವಿಮಾನ

ಪಿಟಿಐ
Published 1 ಅಕ್ಟೋಬರ್ 2020, 19:24 IST
Last Updated 1 ಅಕ್ಟೋಬರ್ 2020, 19:24 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ:ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಯವರ ಪ್ರಯಾಣಕ್ಕಾಗಿ ವಿಶೇಷವಾಗಿ ನಿರ್ಮಿಸಿರುವ ಬೋಯಿಂಗ್(ಬಿ)‌ 777 ವಿಮಾನವೊಂದು ಗುರುವಾರ ಅಮೆರಿಕದಿಂದ ದೆಹಲಿಗೆ ಬಂದಿಳಿದಿದೆ.

ಮತ್ತೊಂದು ಬಿ777 ವಿಮಾನವನ್ನೂ ಶೀಘ್ರದಲ್ಲೇ ಬೋಯಿಂಗ್‌ ಹಸ್ತಾಂತರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನಗಳ ಖರೀದಿ ಹಾಗೂ ಅದನ್ನು ಮರುಮಾರ್ಪಾಟುಗೊಳಿಸಲು ₹8,400 ಕೋಟಿ ವೆಚ್ಚವಾಗಿದೆ.ಭಾರತೀಯ ವಾಯುಪಡೆಯ ಪೈಲಟ್‌ಗಳು ‘ಏರ್‌ ಇಂಡಿಯಾ ಒನ್‌’ ಬಿ777 ಹಾರಾಟ ನಡೆಸಲಿದ್ದಾರೆ.

ಅಮೆರಿಕದ ಅಧ್ಯಕ್ಷರ ವಿಮಾನ ‘ಏರ್‌ಫೋರ್ಸ್‌ ಒನ್‌’ನಲ್ಲಿ ಇರುವಂತೆ ಬಿ777 ವಿಮಾನದಲ್ಲಿ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಇದೆ.

ADVERTISEMENT

2018ರಲ್ಲಿ ಈ ಎರಡು ವಿಮಾನಗಳನ್ನು ಏರ್ ಇಂಡಿಯಾ ಖರೀದಿಸಿತ್ತು. ಕೆಲ ತಿಂಗಳ ಕಾಲ ಇದನ್ನು ನಾಗರಿಕ ವಿಮಾನವಾಗಿಯೂ ಬಳಸಿಕೊಳ್ಳಲಾಗಿತ್ತು. ನಂತರದಲ್ಲಿ ಗಣ್ಯವಕ್ತಿಗಳ ಪ್ರಯಾಣಕ್ಕಾಗಿ, ವಿಮಾನದ ವಿನ್ಯಾಸ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಬದಲಾಯಿಸಲು ಬೋಯಿಂಗ್‌ ಕಂಪನಿಗೆ ಕಳುಹಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.