ADVERTISEMENT

ಚಿನ್ನದ ಅಕ್ರಮ ಸಾಗಾಣಿಕೆ: ಕಸ್ಟಮ್ಸ್‌ ಆಯುಕ್ತರಿಗೆ ಜೀವ ಬೆದರಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 12:13 IST
Last Updated 13 ಫೆಬ್ರುವರಿ 2021, 12:13 IST
.
.   

ತಿರುವನಂತಪುರ: ಚಿನ್ನದ ಅಕ್ರಮ ಸಾಗಾಣೆಯ ಪ್ರಕರಣದ ತನಿಖೆ ನಡೆಸುತ್ತಿರುವ ಕಸ್ಟಮ್ಸ್‌ ಇಲಾಖೆಯ ಆಯುಕ್ತ ಸಮಿತ್‌ ಕುಮಾರ್‌ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ.

ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ಅವರು ಜೀವ ಬೆದರಿಕೆ ಕುರಿತು ವಿವರಿಸಿದ್ದರು. ಬಳಿಕ, ಮಾಧ್ಯಮಗಳ ಜತೆ ಮಾತನಾಡಿರುವ ಅವರು, ‘ವಯನಾಡಿನ ಕಲ್ಪೆಟ್ಟಾದಿಂದ ಕೊಯಿಕೊಡೆಗೆ ತೆರಳುತ್ತಿದ್ದಾಗ ಕೆಲವು ವ್ಯಕ್ತಿಗಳು ಕಾರಿನಲ್ಲಿ ಮತ್ತು ದ್ವಿಚಕ್ರ ವಾಹನದಲ್ಲಿ ಕೊಡುವಳ್ಳಿ ಬಳಿ ಹಿಂಬಾಲಿಸಿದರು. ಸುಮಾರು 20 ಕಿಲೋ ಮೀಟರ್‌ ದೂರು ನನ್ನನ್ನು ಹಿಂಬಾಲಿಸಿದರು’ ಎಂದು ದೂರಿದ್ದಾರೆ.

ಸುಮಿತ್‌ ಕುಮಾರ್‌ ನೇತೃತ್ವದ ತಂಡ ಚಿನ್ನದ ಅಕ್ರಮ ಸಾಗಾಣಿಕೆ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಚಿನ್ನದ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ಕೊಡುವಳ್ಳಿ ಪ್ರದೇಶದ ಹಲವು ವ್ಯಕ್ತಿಗಳು ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.